ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜನವರಿ 6, 2012

ಹರಿಹರಪುರ ಶ್ರೀಧರ್ ಮತ್ತು ಕವಿಮನೆತನದ ಸಮಾವೇಶ


     ಮಿತ್ರ ಶ್ರೀಧರ್ ಮತ್ತು ನನ್ನ ಸ್ನೇಹ ಕಳೆದ ನಾಲ್ಕು ದಶಕಗಳದ್ದು. ಕೆಲವು ತಾತ್ವಿಕ ವಿಷಯಗಳಲ್ಲಿ ಸಣ್ಣಪುಟ್ಟ ಅಭಿಪ್ರಾಯ ಬೇಧಗಳಿದ್ದರೂ ಅದರಿಂದ ನಮ್ಮ ಸ್ನೇಹಕ್ಕೆ ಭಂಗ ಬಂದಿಲ್ಲ. ಯಾವುದೇ ಒಳ್ಳೆಯ ಸಂಗತಿಗಳು, ವಿಚಾರಗಳಿಗೆ ಸ್ಪಂದಿಸುವ ಮನೋಭಾವದ ಶ್ರೀಧರ್ ಸತ್ಸಂಗಗಳನ್ನು ನಡೆಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವ ಅವರು ಸಾಧು-ಸಂತರನ್ನು ಕರೆಯಿಸಿ ಉಪನ್ಯಾಸಗಳನ್ನು ಏರ್ಪಡಿಸುವುದಲ್ಲದೆ ಉಪನ್ಯಾಸಗಳ ಆಡಿಯೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿಕೊಂಡು ವೇದಸುಧೆ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಹೆಚ್ಚಿನ ಜನರಿಗೆ ಸದ್ವಿಚಾರ ತಲುಪಿಸುತ್ತಿರುವುದು ಅವರ ಕಳಕಳಿಗೆ ಸಾಕ್ಷಿ. ಸತ್ಸಂಗಕ್ಕಾಗಿಯೇ ಅವರ ಮನೆಯ ಮೇಲ್ಭಾಗದಲ್ಲಿ ಒಂದು ದೊಡ್ಡ ಸಭಾಂಗಣವನ್ನೇ ಕಟ್ಟಿಸಿ ಸಜ್ಜುಗೊಳಿಸಿರುವುದು ಅವರ ವಿಶೇಷತೆ. ವೇದಸುಧೆ ಅಂತರ್ಜಾಲ ತಾಣಕ್ಕೆ ನನ್ನನ್ನು ಗೌರವ ಸಂಪಾದಕನೆಂದು ಹೆಸರಿಸಿರುವುದು ಅವರು ನನ್ನಲ್ಲಿಟ್ಟ ವಿಶ್ವಾಸಕ್ಕೆ ದ್ಯೋತಕವಾಗಿದೆ. ಅವರು ನನ್ನನ್ನು ಅಣ್ಣನಂತೆ ಭಾವಿಸಿದ್ದಾರೆ. ನಾನೂ ಶ್ರೀಧರರನ್ನು ತಮ್ಮನಂತೆಯೇ ಕಂಡಿದ್ದೇನೆ. 
     25-12-2011ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ ಸಮಾವೇಶದ ವಿಶೇಷ ಆಹ್ವಾನಿತರಾದ ಸನ್ಮಾನ್ಯ ಶ್ರೀ ಸು.ರಾಮಣ್ಣ, ಮುಖ್ಯ ಅತಿಥಿ ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಸೋದರ ಕವಿಸುರೇಶರನ್ನು ಸಮಾವೇಶದ ಹಿಂದಿನ ದಿನ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಸತ್ಕರಿಸಿದ್ದು ಅವರು ಸಮಾವೇಶದ ಕೆಲಸದಲ್ಲಿ ಹೇಗೆ ತೊಡಗಿಕೊಂಡಿದ್ದರು ಎಂಬುದನ್ನು ತೋರಿಸುತ್ತದೆ. ಅಲ್ಲದೆ ಹೆಚ್ಚಿನ ಬಂಧುಗಳನ್ನು ತಮ್ಮ ಮನೆಗೂ ಕಳುಹಿಸುವಂತೆ ನನಗೆ ಹೇಳಿದ್ದರು. ಸಮಾವೇಶದ ದೃಷ್ಯಗಳನ್ನು ಸೆರೆ ಹಿಡಿಯುವುದು, ವಿಡಿಯೋ ಚಿತ್ರೀಕರಿಸಿರುವುದು, ಅದನ್ನು 'ಬಂಧು-ಬಳಗ' ಎಂಬ ಅಂತರ್ಜಾಲ ತಾಣದಲ್ಲಿ ಪ್ರಚುರಪಡಿಸಿ ಸಮಾವೇಶದ ನೆನಪು ಬಹಳ ಕಾಲ ಉಳಿಯುವಂತೆ ಮಾಡಿರುವುದಕ್ಕಾಗಿ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

1 ಕಾಮೆಂಟ್‌:

  1. ನನಗೆ ಗೊತ್ತಿಲ್ಲದಂತೆ ನನ್ನ ಚಿತ್ರವನ್ನು ನೀವು ಸೆರೆಹಿಡಿದುಬಿಟ್ಟಿದ್ದೀರಲ್ಲಾ!ಸಮಾವೇಶಕ್ಕೆ ನನ್ನ ಸಹಕಾರ!! ಏನು ಮಾಡಿದೆ? ಮಾಡಬೇಕಾದ್ದರಲ್ಲಿ ಪ್ರತಿಶತ ಹತ್ತನ್ನೂ ಮಾಡಲಾ ಗಲಿಲ್ಲವಲ್ಲಾ! ಎಂಬ ನೋವಿದೆ.

    ಪ್ರತ್ಯುತ್ತರಅಳಿಸಿ