ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಮೇ 16, 2015

ಟಿವಿಯಲ್ಲಿ ಬಿತ್ತರವಾದ ಕಿರುಚಿತ್ರ 'ಸೆರೆಮನೆ ಸಾಹಸಿ'

     ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟನಾದ, ಮ್ಯಾಜಿಸ್ಟ್ರೇಟನೂ ಆದ ಕಥೆಯಿದು. ಆ ವ್ಯಕ್ತಿ ಬೇರೆ ಯಾರೂ ಆಗಿರದೆ ನಾನೇ ಆಗಿರುವುದು ಆ ದೇವರ ಕೃಪೆ. ನನ್ನ ಆ ಅನುಭವಗಳ ಕುರಿತು ಬಿಟಿವಿ 12.05.2015ರಂದು ಬಿತ್ತರಿಸಿದ ಕಿರುಚಿತ್ರದ ಎರಡು ಭಾಗಗಳ ಲಿಂಕು ಇವು. ಬಿಟಿವಿಯ ಕಾರ್ಯಕ್ರಮ ನಿರ್ಮಾಪಕ ಶ್ರೀ ಪ್ರಶಾಂತರು ನನ್ನ ಬರಹಗಳಿಂದ ಪ್ರಭಾವಿತರಾಗಿ ಈ ಕಿರುಚಿತ್ರ ನಿರ್ಮಾಣದ ಆಸಕ್ತಿ ವಹಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಇದೋ ನಿಮ್ಮ ಅವಗಾಹನೆಗಾಗಿ:

ಕಿರುಚಿತ್ರ ನಿರ್ಮಾಣಕ್ಕೆ ಪ್ರೇರಕವಾದ ಲೇಖನದ ಲಿಂಕ್ ಇದು:
htmlhttp://kavimana.blogspot.in/2012/04/blog-post_03.html

3 ಕಾಮೆಂಟ್‌ಗಳು:

 1. H A Patil
  ಕವಿ ನಾಗರಾಜರವರಿಗೆ ವಂದನೆಗಳು
  ಕಿರುಚಿತ್ರ ನಿರ್ಮಾಣಕ್ಕೆ ಕಾರಣವಾದ ಸಂಪದ ಓದಿದೆ, ತಮ್ಮ ಅಭಿಪ್ರಾಯ ನಿಜ ಸಂಪದ ಕನ್ದಡದ ಅಸಕ್ತ ಬರಹಗಾರರನ್ನು ಬೆಳೆಸಿದೆ ಎಂಬುದಕ್ಕೆ ನಾನೆನ ಒಂದು ನಿದರ್ಶನ.. ಬಿ ಟಿವಿಯಲ್ಲಿ ನಿಮ್ಮ ಕಅರ್ಯಕ್ರಮವನ್ನು ಆ ದಿನ ನೋಡಿರುವೆ. ರಮೇಶ ಕಾಮತರು ನಿಮ್ಮ ಕಾರ್ಯಕ್ರಮದ ವಿಷಯವನ್ನು ಆ ದಿನ ತಿಳಿಸಿದರು, ನಮ್ಮಲ್ಲಿ ಬಿ ಟಿವಿ ಪ್ರಸಾರವಿಲ್ಲದ ಕಾರಣ ಅವರೆ ತಮ್ಮ ಲ್ಯಾಫ್‌ ಟಾಪಿನಲ್ಲಿ ಆ ಕಾರ್ಯಕ್ರಮ ಅವಲೋಕಿಸುವ ಅವಕಾಶ ಮಾಡಿ ಕೊಟ್ಟರು. ಆದರೆ ಕಾರ್ಯಕ್ರಮ ತೃಪ್ತಿ ನೀಡಲಿಲ್ಲ. ನಾವು ಅ ಕಾರ್ಯಕ್ರಮದಲ್ಲಿ ಬಹಳಷ್ಟನ್ನು ನಿರೀಕ್ಷಿಸಿದ್ದೆವು. ಅದರೂ ನಿಮ್ಮ ಬದುಕು ಮತ್ತು ಬರಹ ಕುರಿತಂತೆ ಪರಿಚಯ ಟೆಲಿವಿಜನ್ ಮಾಧ್ಯಮದಲ್ಲಿ ಆದುದು ಖುಷಿ ನೀಡಿತು, ಕಾರ್ಯುಕ್ರಮದ ರೂವಾರಿಯಾದ ನಿಮಗೂ ಮತ್ನ್ನು ಅದನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಕಾಮತರಿಗೂ ದನ್ಯವಾದಗಳು.

  kavinagaraj
  ವಂದನೆಗಳು, ಪಾಟೀಲರೇ. ಪೂರ್ಣವಾಗಿ ಪ್ರಸಾರವಾಗಿದ್ದರೆ ಅದು ಸುಮಾರು 75 ನಿಮಿಷಗಳ ಕಾರ್ಯಕ್ರಮ. 30 ನಿಮಿಷಗಳ ಅವಧಿಗೆ ಪ್ರಸಾರ ಮಾಡಲಾಗುವುದೆಂದು ತಿಳಿಸಿದ್ದರು. ಕೊನೆಯಲ್ಲಿ ಪ್ರಸಾರವಾದದ್ದು 15 ನಿಮಿಷಗಳು. ಮಧ್ಯದಲ್ಲಿ ಜಾಹಿರಾತುಗಳಿರಲಿಲ್ಲ ಎಂಬುದೇ ಸಮಾಧಾನ. ಮೊಟಕುಗೊಳಿಸಿದ ಕಾರ್ಯಕ್ರಮದಿಂದಾಗಿ ಅಪೂರ್ಣವಾದ ಅನುಭವ ಆಯಿತು. ನನ್ನ ಮಿತ್ರರು, ಬಂಧುಗಳ ಅಭಿಪ್ರಾಯವೂ ಇದೇ. ಮಾಧ್ಯಮದವರೇ ಆಸಕ್ತಿ ವಹಿಸಿ ಮಾಡಿದ್ದು ಸಮಾಧಾನವಷ್ಟೆ. ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮಗೂ, ರಮೇಶಕಾಮತರಿಗೂ.

  nageshamysore
  ಕವಿಗಳೆ ನಮಸ್ಕಾರ. ಬರಹ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕು ಕಾಲಿಟ್ಟಿದ್ದಕ್ಕೆ ಅಭಿನಂದನೆಗಳು. ಈ ನೆಪದಲ್ಲಿ ನನಗೆ ನಿಮ್ಮ 2012 ರ ಬರಹ ಓದುವ ಅವಕಾಶ ಸಿಕ್ಕಿದ್ದು ಮಾತ್ರವಲ್ಲದೆ ನಿಮ್ಮ ಅಂದಿನ ಸಾಹಸದ ತುಣುಕನ್ನು ಅರಿಯಲು ಸಾಧ್ಯವಾಯ್ತು. ಚೈತ್ರ ಯಾತ್ರೆ ಹೀಗೆ ಮುಂದುವರೆಯುತ್ತಿರಲಿ !

  kavinagaraj
  ವೇದಭಾರತಿಯ ಅನೇಕ ಚಟುವಟಿಕೆಗಳು ದೃಷ್ಯ ಮಾಧ್ಯಮದಲ್ಲಿ ಪ್ರಸಾರಗೊಂಡಿವೆ. ಕಳೆದ ಒಂದೆರಡು ವರ್ಷದ ಹಿಂದೆ ಸರ್ಕಾರದ ಗಮನ ಸೆಳೆಯಲು ಸರ್ಕಾರದ 'ಕಾರ್ಯದಕ್ಷತಾ ಯಜ್ಞ'ವನ್ನು ಸಾತ್ವಿಕ ಪ್ರತಿಭಟನೆಯಾಗಿ ಮಾಡಿದ್ದು ಬಹುತೇಕ ಎಲ್ಲಾ ಚಾನೆಲ್ಲುಗಳಲ್ಲೂ ಬಹಳ ಪ್ರಚಾರ ಪಡೆದಿತ್ತು. ನನ್ನ ಹಳೆಯ ಬರಹ ನಿಮ್ಮ ಕಣ್ಣಿಗೆ ಬಿದ್ದದ್ದು ಕಂಡು ಸಂತೋಷವಾಯಿತು. ಧನ್ಯವಾದಗಳು, ನಾಗೇಶರೇ.

  partha
  ನಾಗರಾಜರಿಗೆ ನಮಸ್ಕಾರ‌ ನಿಮ್ಮ‌ ಜೀವನ‌ ಅನುಭವ‌ ಕಿರುಚಿತ್ರವಾಗಿದ್ದು ನಿಜಕ್ಕೂ ಸಂತಸ‌ . ಅದು ಯುವಜನಾಂಗಕ್ಕೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ
  ನಮ್ಮಲ್ಲಿ ಬೀ ಟಿವಿ ಬರಲಿಲ್ಲ‌.
  ಈಗ‌ ಕೊಟ್ಟಿರುವ‌ ಲಿಂಕ್ ನೋಡುತ್ತೇನೆ
  ಪಾರ್ಥಸಾರಥಿ

  kavinagaraj
  ವಂದನೆಗಳು, ಪಾರ್ಥರೇ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. naveengkn
   ಕವಿಗಳೇ ನಮಸ್ತೆ,,,,
   ಕಿರುಚಿತ್ರ ನೋಡಿದೆ,,,,,,,
   ಮೊದಲನೆಯದಾಗಿ ಕಿರುಚಿತ್ರ ನಿರ್ಮಾಣ ಮಾಡುವಲ್ಲಿ ಸಂಪದದ ಮಹತ್ವದ ಪಾತ್ರಕ್ಕೆ, ಸಂಪದ ಕುಟುಂಬಕ್ಕೆ ಧನ್ಯವಾದಗಳು,,,,
   ನಿಮ್ಮ ಬದುಕಿನ ಕಿರು ಚಿತ್ರಣವೇ ಇಷ್ಟೊಂದು ಆಳವಾಗಿರುವಾಗ,,,,,,,, ನಿಜ ಚಿತ್ರಣ ಇನ್ನೆಷ್ಟು ಘೋರ,,, !!!!!
   ಅಂತಹ ಸಂದರ್ಭದಲ್ಲಿಯೂ ಬದುಕಿನ ಗುರಿಯೆಡೆಗೆ ನಿಮಗಿದ್ದ ತಾಳ್ಮೆ, ಹಾಗು ಸಹನೆ, ಅಲ್ಪ ಸಹನಿಗನಾದ ನನಗೆ ಕೆನ್ನೆಗೆ ಚಟೀರನೆ ಬಾರಿಸಿದಂತಿತ್ತು,,,,,,, ನಿಮ್ಮ ಬರಹದ ಜೊತೆಗೆ ಬದುಕೂ ಒಂದು ಸ್ಪೂರ್ತಿಯ ಬೆಳಕಿನ ಕಿರಣವಾಯಿತು,,,, ಹೇಳಲು ಆಗದ ಬದುಕಿನ ದ್ವಂದ್ವಗಳಿಗೆ ನೀವೆಲ್ಲೋ, ತತ್ತಿ ಉತ್ತರಿಸಿದಂತಿತ್ತು,,,,,,
   ನಿಮ್ಮ ದಿಟ್ಟತೆ ಇನ್ನಷ್ಟು ಹೆಚ್ಚಾಗಲಿ,,,,
   ಧನ್ಯವಾದಗಳೊಂದಿಗೆ
   -ಜೀ ಕೇ ನ

   kavinagaraj
   ಧನ್ಯವಾದ, ನವೀನರೇ. ತುರ್ತುಪರಿಸ್ಥಿತಿ ಕಾಲದ ನನ್ನ ಅನುಭವಗಳ ಕುರಿತು ನನ್ನ ಪುಸ್ತಕ 'ಆದರ್ಶದ ಬೆನ್ನು ಹತ್ತಿ . .' ಮೂರು ವರ್ಷಗಳ ಹಿಂದೆ ಪ್ರಕಟಿಸಿರುವೆ. ಓದಲು ಆಸಕ್ತಿಯಿದ್ದರೆ ವಿಳಾಸ ತಿಳಿಸಿ ನನಗೆ ಮೇಲ್ ಮಾಡಿ, ಕಳಿಸುವೆ.(kavinagaraj2010@gmail.com)

   ಅಳಿಸಿ
  2. ಗಣೇಶ
   ಕವಿನಾಗರಾಜರೆ,
   ನೇಪಾಳ,ದೆಹಲಿಯಲ್ಲಿ ಪುನಃ ಭೂಕಂಪ ಆಯಿತು ಎಂದು ಸುದ್ದಿ ಬಂತು. ಟಿ.ವಿ ಆನ್ ಮಾಡಿ ಸರಿಯಾದ ವಿವರಕ್ಕಾಗಿ ಚಾನಲ್ ಸರ್ಚ್ ಮಾಡುತ್ತಿರುವಾಗ ಬಿಟಿವಿಯಲ್ಲಿ ತಾವು ಕಾಣಿಸಿದಿರಿ.ಕೊನೆಯ ೪-೫ ನಿಮಿಷ,.. ಎಲ್ಲರನ್ನೂ ಕರೆದು ತೋರಿಸುವುದರೊಳಗೆ ಮುಗಿದೇ ಹೋಗಿತ್ತು :(. ಈಗ ಇಲ್ಲಿ ಪೂರ್ತಿ ನೋಡಿದೆ. ನಿಮ್ಮ ಹೆಚ್ಚಿನೆಲ್ಲಾ ಲೇಖನ ಓದಿರುವ ನನಗೆ ವಿವರಣೆ ಸಮಾಧಾನವಾಗಿಲ್ಲವಾದರೂ ಪರವಾಗಿಲ್ಲ.

   kavinagaraj
   ಧನ್ಯವಾದ, ಗಣೇಶರೇ. ಹಲವು ವರ್ಷಗಳ ಕಥೆ 15 ನಿಮಿಷದಲ್ಲಿ ಹೇಳಿರುವದೇ ಟಿವಿಯವರ ಸಾಹಸವೆನ್ನುವೆ. 'ಇವನೂ ಒಬ್ಬನಿದ್ದಾನೆ' ಎಂದು ತೋರಿಸಿದ್ದಾರೆ.

   ಅಳಿಸಿ