ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಜೂನ್ 3, 2012

ಶರಣೋ ಶರಣು


ನೋವನಿತ್ತ ದೇವನಿಗೆ ಶರಣೋ ಶರಣು |
ನಲಿವನಿತ್ತ ದೇವನಿಗೆ ಶರಣೋ ಶರಣು ||


ಬರಿಗೈಲಿ ಬಂದೆನೆಂದು ತೋರಿಹೆ ಶರಣು
ಬರಿಗೈಲಿ ಪೋಪೆನೆಂದು ಹೇಳಿಹೆ ಶರಣು |
ನನದೆಂಬ ಮೋಹಪಾಶ ಹರಿಯೋ ಶರಣು
ಅತ್ತಲಿತ್ತ ಸರಿಯದಂತೆ ನೋಡಿಕೊ ಶರಣು ||


ನಿಂದಕರ ವಂದಿಸಲು ಕಲಿಸಿಹೆ ಶರಣು
ಪೀಡಕರೇ ಗುರುವೆಂದು ಸಾರಿಹೆ ಶರಣು |
ಅನುಭವದ ಬುತ್ತಿ ಯಿತ್ತು ತಣಿಸಿಹೆ ಶರಣು
ಕರಪಿಡಿದು ನಡೆಸಿರುವೆ ಶರಣೋ ಶರಣು ||

ಒಡಲಾಳದ ರಜತಮವ ಕಳೆಯೋ ಶರಣು
ಒಳಗಣ್ಣಿನ ಬೆಳಕಿನಲಿ ನಡೆಸೋ ಶರಣು |
ಒಳದನಿಯು ಕೇಳುವಂತೆ ಮಾಡೋ ಶರಣು
ಒಳ ಹೊರಗು ಒಂದೆನಿಸೆ ಶರಣೋ ಶರಣು ||
***************
-.ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. ಗಲ್ಫ್ ಕನ್ನಡಿಗ ಡಾಟ್ ಕಾಂ ನಲ್ಲಿ ಪ್ರಕಟಗೊಂಡ ನಿಮ್ಮ ಕವನಗಳ ಬಗ್ಗೆ ನನ್ನ ಪ್ರತಿಕ್ರಿಯೆ:

    ಈ ಲೇಖನ ಓಡಿದ ಮೇಲೆ ಕವಿ ಮನಕ್ಕೆ ಲಗ್ಗೆ ಇಟ್ಟು ಅವರ ಬರಹಗಳನ್ನು ಪೂರ್ಣ ಓದಿ ಮತ್ತೆ ಪ್ರತಿಕ್ರಿಯಿಸುತ್ತೇನೆ.

    ಲೇಖಕನ ಪೂರ್ಣ ಪರಿಚಯವಿಲ್ಲದೆ, ಪುಟ್ಟ ಪ್ರತಿಕ್ರಿಯೆಯೂ ಪೊಳ್ಳಾಗಿ ಕಾಣುತ್ತದೆ! ಅಲ್ಲವೇ?

    ನನ್ನ ಬ್ಲಾಗಿಗೂ ಸ್ವಾಗತ.

    ಪ್ರತ್ಯುತ್ತರಅಳಿಸಿ