ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಸೆಪ್ಟೆಂಬರ್ 4, 2016

ಮಿತ್ರ ಸುರೇಶ ನಾಡಿಗರ ಅಕಾಲಿಕ ನಿಧನ!

       ಮಿತ್ರ ಪಾರ್ಥಸಾರಥಿಯವರ ಫೇಸ್ ಬುಕ್ ಪೋಸ್ಟಿನಿಂದ ಶಿಕಾರಿಪುರದ ಮಿತ್ರ ಸುರೇಶ ನಾಡಿಗ್ (ಕೋಮಲ್ ಕುಮಾರ್) ನಿಧನದ ಸುದ್ದಿ ತಿಳಿದು ಬೇಸರವಾಯಿತು. ಯುವ ಪತ್ರಕರ್ತರಾಗಿ, ಬರಹಗಾರರಾಗಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಹೆಚ್ಚಾಗಿ ಹಾಸ್ಯ ಲೇಖನಗಳಿಂದ ರಂಜಿಸುತ್ತಿದ್ದ ಅವರ ಅಕಾಲಿಕ ನಿಧನವಾಗಬಾರದಿತ್ತು. ನಾನು ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದಾಗ ನನ್ನೊಡನೆ ವಿಷಯ ಸಂಗ್ರಹಣೆ, ಚರ್ಚೆ ಇತ್ಯಾದಿಗಳಿಗಾಗಿ ಅವರು ಭೇಟಿ ಮಾಡುತ್ತಿದ್ದ ಘಳಿಗೆಗಳು ನೆನಪಾದವು. ಒಂದೆರಡು ಸಲ ಅವರ ಆಹ್ವಾನದ ಮೇಲೆ ಅವರ ಮನೆಗೂ ಹೋಗಿ ಚಹಾ ಸ್ವೀಕರಿಸಿದ್ದುಂಟು. ಕಾಶಿ ವಿಶ್ವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಪುನರ್ ರಚನೆಯಾದಾಗ ಮುಜರಾಯಿ ಅಧಿಕಾರಿಯಾಗಿ ಅವರನ್ನು ಅಲ್ಲಿನ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅವರು ಶ್ರಮಿಸಿದ್ದರು. ನಾನು ನಿವೃತ್ತಿಯಾಗಿ ಹಾಸನದಲ್ಲಿ ನೆಲೆಸಿದ್ದ ನಂತರದಲ್ಲೂ ಅವರು ದೂರವಾಣಿ ಮೂಲಕ ನನ್ನ ಸಂಪರ್ಕದಲ್ಲಿದ್ದರು. ನನ್ನ ಲೇಖನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು. ನಂತರದಲ್ಲಿ ಅವರು ಬೆಂಗಳೂರಿಗೆ ವಾಸ ಹೋದರೆಂದು ತಿಳಿದಿತ್ತು. ಇದೀಗ ಅವರ ಮರಣದ ಸುದ್ದಿ!! ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ.
      ಶಿಕಾರಿಪುರದಲ್ಲಿದ್ದಾಗ ಅವರೊಡನೆ ಇದ್ದ ಸಂದರ್ಭದ ಯಾವುದಾದರೂ ಫೋಟೋಗಳು ಇವೆಯೇ ಎಂದು ಹುಡುಕಿದಾಗ ಈ ಎರಡು ಪತ್ರಿಕಾ ವರದಿಯ ತುಣುಕುಗಳು ಕಂಡವು. ನೆನಪಿಗಾಗಿ ಪ್ರಕಟಿಸಿರುವೆ. [ಮೊದಲ ಚಿತ್ರದಲ್ಲಿ ಮೊದಲಿನವರು, ಎರಡನೆಯ ಚಿತ್ರದಲ್ಲಿ ಬಲದಿಂದ ಎರಡನೆಯವರು ಸುರೇಶ್.]



2 ಕಾಮೆಂಟ್‌ಗಳು:

  1. ಅವರ ಹಾಸ್ಯ ಬರಹಗಳ ಹಿಂದೆ ಇನಿತು ನೋವಿನ ಸಾಗರವಿದ್ದೀತು ಎಂಬ ಕಲ್ಪನೆಯೇ ಇರಲಿಲ್ಲ!
    ಅವರ ಆತ್ಮಕ್ಕೆ ಶಾಂತಿ ದೊರೆಯಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಚಟುವಟಿಕೆಯ ವ್ಯಕ್ತಿತ್ವದ ಅವರು ಬದುಕನ್ನು ಪ್ರೀತಿಸಿದವರು. ಸಾವು ಅವರನ್ನು ಇಷ್ಟು ಬೇಗ ಕರೆದೊಯ್ಯಬಾರದಿತ್ತು.

      ಅಳಿಸಿ