ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ !
ಏಕಮುಖ ಬಹುಮುಖ ಸುಮುಖ ಕುಮುಖ !!
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ !
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||
ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ |
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ ||
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ |
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||
ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು |
ಸೇವೆಯನು ಗೈಯುವರು ನಂಬಿಕೆಯ ನಟಿಸುವರು ||
ನೀನೆ ಗತಿ ನೀನೆ ಮತಿ ಪರದೈವವೆನ್ನುವರು |
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||
ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು|
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು ||
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು |
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
-ಕ.ವೆಂ.ನಾಗರಾಜ್.
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು |
ಪ್ರತ್ಯುತ್ತರಅಳಿಸಿಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
ಗುಣಕೆ ಸೋಲು ತತ್ಕಾಲ ಇರಬಹುದು
ಶಾಶ್ವತದ ಸುಖ ಹಿಂದಿಂದೆ ಬರಲಿಹುದು
ಲಕುಮಿ ತಾನ್ ಚಂಚಲೆಯು
ನಿಲ್ಲುವವಳೆಲ್ಲಿ?
ಅರಿತು ನಡೆದೊಡೆ ಸ್ವರ್ಗ
ತಿಳಿದಿರಲಿ ಮೂಢ.
ಪ್ರಿಯ ಶ್ರೀಧರ,
ಪ್ರತ್ಯುತ್ತರಅಳಿಸಿನಿರೀಕ್ಷೆ, ಅಪೇಕ್ಷೆ ಮತ್ತು ವಾಸ್ತವತೆಗಳ ಹೊಂದಾಣಿಕೆ ಕಷ್ಟದ ವಿಷಯ. ಅದಿರಲಿ, ಮೂಢ (moodha) ಎಂದು ಬರೆದದ್ದು ಮಾಢ (madha)ಎಂಬಂತೆ ಕಾಣುತ್ತದೆ. ಬಹುಷಃ ನುಡಿ ಲಿಪಿಯ ಬಳಕೆ ಕಾರಣವಿರಬಹುದು.ನನ್ನ ಪಾಸ್ವಡ್ ಱ ಬದಲಿಸಿದ್ದೇನೆ.
ಬರಹದಲ್ಲೂ ಹಾಗೆಯೇ “ಮೂ “ ಸರಿಯಾಗಿ ಪ್ರಕಟವಾಗುವುದಿಲ್ಲ.
ಪ್ರತ್ಯುತ್ತರಅಳಿಸಿಸಂತೋಷ್ ಎನ್. ಆಚಾರ್ಯ
ಪ್ರತ್ಯುತ್ತರಅಳಿಸಿ13MAY2010 9:54
ಅನೇಕ ಬಾರಿ ಮೊಗವಾಡಗಳನ್ನು ಧರಿಸಿಕೊಂಡೆ ಬದುಕು ಸಾಗುತ್ತದೆ. ಎಲ್ಲ ಮೊಗವಾಡಗಳನ್ನು ಕಳಚಿಕೊಂಡವ ಭಗವತ್ತತೆಯನ್ನು ಪಡೆಯುತ್ತಾನೆ. ಸಜ್ಜನ ಮತ್ತು ದುರ್ಜನ ನಮ್ಮೊಳಗೇ ಇದೆ ನಿಜ, ಆದರೆ ಅದರ ಮಧ್ಯೆ ವಿವೇಕವೆಂಬ ಸಣ್ಣ ರೇಖೆಯಿರುತ್ತದೆ. ಚಿಂತನೆ ಚೆನ್ನಾಗಿದೆ
ಬೆಳ್ಳಾಲ ಗೋಪೀನಾಥ ರಾವ್
13MAY2010 9:59
ನಾಗರಾಜರೇ
ಸಹಜ ಉತ್ತಮ ನಿರೂಪಣೆ
ನನ್ನಿ
Ksraghavendranavada
14MAY2010 10:03
ನಾಗರಾಜರೇ, ಸ೦ತೋಷರ ಮಾತಿಗೆ ನಮ್ಮ ಸಹಮತವಿದೆ. ಮೂಢ ಉವಾಚ-೧ ಚೆನ್ನಾಗಿದೆ.
ನಮಸ್ಕಾರಗಳು.
ವೆ೦ಕಟೇಶಮೂರ್ತಿ. ವಿ.ಎಸ್.
14MAY2010 10:05
ನಾಗರಾಜರೇ
ಮೂಢ ಉವಾಚ ಚೆನ್ನಾಗಿದೆ.
ನನ್ನಿ