ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 16, 2010

ಸೇವಾಪುರಾಣ-18 :ಗುಲ್ಬರ್ಗ ತೋರಿಸಿದರು-3: ಕಣ್ಣು ಹಾಕೀರಿ, ಹುಷಾರ್!

ಕಣ್ಣು ಹಾಕೀರಿ, ಹುಷಾರ್ !
     ಸೇಡಂ ತಾಲ್ಲೂಕಿನ ಜನರು ಸ್ವಭಾವತಃ ಸಜ್ಜನರು, ಬಡತನವಿದ್ದರೂ ಆತಿಥ್ಯ ನೀಡುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದವರು. ಮೈಸೂರು, ಮಂಗಳೂರು ಕಡೆಯ ಜನರನ್ನು ಗೌರವದಿಂದ ಕಾಣುವ ದೊಡ್ಡಸ್ತಿಕೆ ಅವರಲ್ಲಿತ್ತು. ಅಲ್ಲಿನ ಹವಾಮಾನದ ಕಾರಣದಿಂದಾಗಿ ಸ್ವಲ್ಪ ಆಲಸಿಗಳು. ಒಳ್ಳೆಯ ಸ್ವಭಾವದವರಾದರೂ ಕೇಡು ಬಗೆದವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಈ ಬಗ್ಗೆ ನನ್ನ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು. ನಾನು ಒಂದು ಹಳ್ಳಿಗೆ ಸ್ಥಳತನಿಖೆ ಸಲುವಾಗಿ ಹೋಗಿದ್ದೆ. ಆ ಹಳ್ಳಿಯ ಕುಲಕರ್ಣಿ (ಗ್ರಾಮಲೆಕ್ಕಿಗ) ನನಗೆ ಆತನ ಸ್ನೇಹಿತನ ಮನೆಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದ. ನಾನು, ಕುಲಕರ್ಣಿ, ಅವನ ಸ್ನೇಹಿತರು ಎಲ್ಲರೂ ಉಭಯಕುಶಲೋಪರಿ ಮಾತನಾಡುತ್ತಾ ಒಟ್ಟಿಗೆ ಊಟ ಮಾಡಿದೆವು. ನಾನು ಒಬ್ಬನೇ ಇದ್ದುದರಿಂದ ಉಳಿಯುವ ಸಂದರ್ಭಗಳಲ್ಲಿ ಹಳ್ಳಿಗಳಲ್ಲೇ ತಂಗುತ್ತಿದ್ದೆ. ಆ ಗ್ರಾಮದ ಕೆಲಸವಾದ ನಂತರ ನಾನು ಸಮೀಪದ ಮಳಖೇಡದ ರಾಯರ ಮಠಕ್ಕೆ ಹೋಗಿ ಅಲ್ಲಿನ ಕೊಠಡಿಯೊಂದರಲ್ಲಿ ಉಳಿದುಕೊಂಡೆ. ನನ್ನನ್ನು ಮಠಕ್ಕೆ ಬಿಟ್ಟು ಕುಲಕರ್ಣಿ ವಾಪಸು ಹಳ್ಳಿಗೆ ಹೋದ. ಮರುದಿನ ಬೆಳಿಗ್ಗೆ ನಾನು ಸೇಡಂಗೆ ಮರಳಿ ಬಂದು ಕಛೇರಿಗೆ ಹೋದಾಗ ಅಲ್ಲಿನ ಸಬ್ ಇನ್ಸ್ ಪೆಕ್ಟರರು ನನಗೆ ಕರೆಕಳುಹಿಸಿದರು. ಠಾಣೆಗೆ ಹೋದಾಗ ನನಗೆ ತಿಳಿದ ವಿಷಯ ನನ್ನನ್ನು ಬೆಚ್ಚಿಬೀಳಿಸಿತು. ಸಬ್ ಇನ್ಸ್ ಪೆಕ್ಟರರ ಟೇಬಲ್ ಮೇಲೆ ಒಂದು ಗಾಜಿನ ಬಾಟಲಿಯಲ್ಲಿ ಎರಡು ರಕ್ತಸಿಕ್ತ ಕಣ್ಣುಗಳಿದ್ದವು. ಲಾಕಪ್ಪಿನ ಸರಳುಗಳ ಹಿಂದೆ ಹಿಂದಿನ ದಿನ ನಾನು ಯಾರ ಮನೆಯಲ್ಲಿ ಊಟ ಮಾಡಿದ್ದೆನೋ ಆ ವ್ಯಕ್ತಿ ಮತ್ತು ಅವನ ಸಹೋದರರು ಇದ್ದುದು ಕಾಣಿಸಿತು. ವಿಷಯ ಗಂಭೀರವಾಗಿದೆಯೆಂದು ಭಾಸವಾಯಿತು. ಗ್ರಾಮಲೆಕ್ಕಿಗ ತನ್ನ ಸ್ನೇಹಿತನ ಮನೆಗೆ ಆಗಾಗ್ಗೆ ಹೋಗಿಬಂದು ಮಾಡುತ್ತಿದ್ದು ಕ್ರಮೇಣ ಗ್ರಾಮಲೆಕ್ಕಿಗನಿಗೂ ಅವನ ಸ್ನೇಹಿತನ ಪತ್ನಿಗೂ ಪರಸ್ಪರ ವಿಶ್ವಾಸ ಬೆಳೆದು ಅಕ್ರಮ ಸಂಬಂಧದವರೆಗೂ ಮುಂದುವರೆದಿತ್ತಂತೆ. ವಿಷಯ ತಿಳಿದ ಸ್ನೇಹಿತ ಗ್ರಾಮಲೆಕ್ಕಿಗನ ಮೇಲೆ ಸೇಡು ತೀರಿಸಿಕೊಳ್ಳಲು ಮುಹೂರ್ತಕ್ಕಾಗಿ ಕಾಯುತ್ತಿದ್ದನಂತೆ. ನಾನು ಹಳ್ಳಿಗೆ ಬಂದ ದಿನ ಊಟಕ್ಕೆ ವ್ಯವಸ್ಥೆ ಮಾಡಲು ಗ್ರಾಮಲೆಕ್ಕಿಗ ಹೇಳಿದಾಗ ಸ್ನೇಹಿತ ಕೂಡಲೇ ಒಪ್ಪಿ ಅಂದು ತನ್ನ ಮನೆಯಲ್ಲೇ ಉಳಿದುಕೊಳ್ಳಬಹುದೆಂದೂ ಹೇಳಿದ್ದನಂತೆ. ಮಧ್ಯರಾತ್ರಿಯಲ್ಲಿ ಅವನು ತನ್ನ ಸಹೋದರರೊಂದಿಗೆ ಒಟ್ಟಾಗಿ ಗ್ರಾಮಲೆಕ್ಕಿಗನ ಕೈಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ತನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ ಅವನ ಕಣ್ಣುಗಳನ್ನು ಕಿತ್ತಿದ್ದಲ್ಲದೆ ಅದನ್ನು ಬಾಟಲಿಯಲ್ಲಿ ಹಾಕಿಕೊಂಡು ಮರುದಿನ ಬೆಳಿಗ್ಗೆ ಬಂದು ಠಾಣೆಗೆ ಸ್ವತಃ ಬಂದು ಶರಣಾಗಿದ್ದನಂತೆ. ನಾನು ಅಂದು ಹತ್ತಿರದ ಮಳಖೇಡದ ರಾಯರ ಮಠ ನೋಡುವ ಮತ್ತು ಅಲ್ಲಿಯೇ ತಂಗುವ ಆಸಕ್ತಿ ತೋರಿರದಿದ್ದರೆ ಆ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾಗಬೇಕಾಗುತ್ತಿತ್ತು. (ನನ್ನನ್ನು ಆರೋಪಿಗಳಲ್ಲಿ ಒಬ್ಬನಾಗಿಯೂ ಮಾಡಬಹುದಿತ್ತು!). ಮಳಖೇಡಕ್ಕೆ ಹೋಗಿದ್ದರಿಂದ ಠಾಣೆಗೆ ಹಾಜರಾಗಿ ಹೇಳಿಕೆ ಕೊಡುವಷ್ಟಕ್ಕೆ ಮಾತ್ರ ನನ್ನ ಪಾತ್ರ ಸೀಮಿತವಾಯಿತು. ಆಸ್ಪತ್ರೆಯಲ್ಲಿದ್ದ ಗ್ರಾಮಲೆಕ್ಕಿಗನನ್ನು ಕಂಡು ಸಾಂತ್ವನ ಹೇಳಿದೆ. ಆತನ ತಪ್ಪಿನ ವಿಮರ್ಶೆ ಮತ್ತು ಬುದ್ಧಿವಾದ ಹೇಳುವ ಸಂದರ್ಭ ಅದಾಗಿರಲಿಲ್ಲ. ದೃಷ್ಟಿಹೀನನಾದ ಆತನಿಗೆ ಆತನ ಹಕ್ಕಿನಲ್ಲಿದ್ದ ರಜೆ ಇರುವವರೆಗೆ ರಜೆ ಮಂಜೂರು ಮಾಡಿ ನಂತರದಲ್ಲಿ ಅವನನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಯಿತು.

3 ಕಾಮೆಂಟ್‌ಗಳು:

  1. neevobba kendra sarkaari noukararaagi, pramanik noukarraagi punha rajys sarkaari noukarraagi prmaanikategaagi horatamadutta protsaha maadbekaada adhikaarigale nimage shatrugalaagi obba sarkaari noukaranannu anaagrikateyinda nadesikondu prmaanikanaada karnakke nimma tande, taayi sodara, sodari ellarigi maanasika himse neediruttare. neevu nimma puraanavannu sowmyvaagi heluta hoguttiri Odidare my jummenuttade. haagu hinde swatantrakkagi horadida veera savarkar, bhgathsingh muntadavara nenapaaguttade. Addru neevu chalwantaru. nimage jayavaagali mitrare.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರತಿಕ್ರಿಯೆ ನನಗೆ ತುಂಬಾ ಸಂತೋಷ ನೀಡಿದೆ, ಶ್ರೀ ನಂಜುಂಡರಾಜುರವರೇ.

    ಪ್ರತ್ಯುತ್ತರಅಳಿಸಿ
  3. ಬೆಳ್ಳಾಲ ಗೋಪೀನಾಥ ರಾವ್
    16SEP2010 7:44
    ಏನೆಲ್ಲಾ ಇದೆ ಕವಿಗಳೇ ನಿಮ್ಮ ತಿಜೋರಿಯಲ್ಲಿ
    ಅಬ್ಬಾ....?

    ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
    16SEP2010 11:27
    [ಏನೆಲ್ಲಾ ಇದೆ ಕವಿಗಳೇ ನಿಮ್ಮ ತಿಜೋರಿಯಲ್ಲಿ
    ಅಬ್ಬಾ....?]
    ಹೌದು; ನನ್ನ ಉದ್ಗಾರವೂ ಅದೇ ...

    Kavinagaraj
    17SEP2010 9:03
    ಧನ್ಯವಾದ, ಗೋಪಿನಾಥರೇ ಮತ್ತು ಶಿವರಾಮ ಶಾಸ್ತ್ರಿಗಳೇ. ನಿಮ್ಮಗಳ ಪ್ರೋತ್ಸಾಹ ಅವುಗಳು ಹೊರಬರಲು ಕಾರಣವಾಗಿದೆ.

    ಮಂಜುನಾಥ ಹೊಸೂರು
    16SEP2010 10:51
    ಅಬ್ಬಾ!!! ಗಬ್ಬರ್ ಸಿಂಗನ ಡೈಲಾಗ್ ನೆನಪಾಯಿತು.. ಕೈ ಬದಲು ಕಣ್ಣು ಅಷ್ಟೇ ವ್ಯತ್ಯಾಸ.

    Kavinagaraj
    17SEP2010 9:04
    ವಂದನೆಗಳು, ಮಂಜುನಾಥ್.

    ಸಿ ಸೋಮಶೇಖರಯ್ಯ
    17SEP2010 6:16
    ಸದ್ಯ ನೀವು ರಾಯರ ಮಠದಲ್ಲಿ ಉಳಿದುದು ಗಂಡಾಂತರದಿಂದ ಪಾರು ಮಾಡಿತು

    Kavinagaraj
    17SEP2010 9:05
    ನಿಮ್ಮ ಮೆಚ್ಚುಗೆ ನನಗೆ ಪ್ರೋತ್ಸಾಹಕರವಾಗಿದೆ. ಧನ್ಯವಾದಗಳು, ಸೋಮಶೇಖರಯ್ಯನವರೇ.

    ಗೋಪಾಲ್ ಮಾ ಕುಲಕರ್ಣಿ
    17SEP2010 9:48
    ರಾಯರ ಅನುಗ್ರಹದಿಂದ ನಿಮಗೆ ಒಳ್ಳೆಯದಾಗಿತು.

    Kavinagaraj
    17SEP2010 4:39
    ಹೌದು, ಗೋಪಾಲ್.

    ಪ್ರಮೋದ್ ಶ್ರೀನಿವಾಸ
    17SEP2010 10:31
    ಥ್ರಿಲ್ಲರ್ ಸಿನೆಮ ನೋಡಿದ ಹಾಗಾಯ್ತು ರಾಯರೆ . ಚೆನ್ನಾಗಿದೆ ನಿಮ್ಮ ಅನುಭವ ಪದಗಳಲ್ಲಿ

    Kavinagaraj
    17SEP2010 4:40
    ಧನ್ಯವಾದಗಳು, ಪ್ರಮೋದ್. ಆ ಸಿನೆಮಾದಲ್ಲಿ ನಾನೂ ಒಬ್ಬ ಪಾತ್ರಧಾರಿಯಾಗಿದ್ದೆ!

    Raghu S P
    17SEP2010 11:07
    :) : ) :) :)

    Kavinagaraj
    17SEP2010 4:41
    :-):):):):)

    ಹೊಳೆ ನರಸೀಪುರ ಮಂಜುನಾಥ
    17SEP2010 12:20
    ರಕ್ತ ಸಿಕ್ತ ಅಧ್ಯಾಯ, ಕಣ್ಣುಗಳ ಅ೦ತ್ಯ, ಘೋರವಾಗಿದೆ ಕವಿಗಳೆ ಈ ಬಾರಿಯ ಸೇವಾ ಪುರಾಣ!

    Kavinagaraj
    17SEP2010 4:42
    ನಿಜ, ಮಂಜುರವರೇ. ಪ್ರತಿಕ್ರಿಯೆಗೆ ವಂದನೆ.

    ಚೇತನ್ ಕೋಡುವಳ್ಳಿ
    18SEP2010 8:04
    ಜೈಲ್ನಲ್ಲಿ ಕಥೆ, ಕೆಲಸದಲ್ಲಿ ಹಿಂಗೆ ಅಬ್ಬಬ್ಬ.....ನಿಮ್ಮ ಯಾವುದೇ ಸರಣಿ ಮಿಸ್ ಮಾಡದೆ ಓದ್ತಿದೀನಿ

    Kavinagaraj
    19SEP2010 7:02
    ಆತ್ಮೀಯ ಚಿಕ್ಕೂ, ಈ ರೀತಿಯ ಪ್ರೋತ್ಸಾಹವೇ ಬರೆಯಲು ಪ್ರೇರಿಸುವುದು! ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ