ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಸೆಪ್ಟೆಂಬರ್ 1, 2010

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

5 ಕಾಮೆಂಟ್‌ಗಳು:

  1. Nagarj Sir,

    Nimma kavanatumbaa tumbaa chennagide...arthapurna, bhavapurna, praasapurna, sundara kavana...nimmella barahagalannu odta iddini....ellavu tumbaa chennagive....nimma blog nnu follow maado kondi ellu kaanisilla....settings nalli change maadi....nimma blog ge baroru jaasti aagtaare....nimma Blog Tumbaane chennagide....

    ಪ್ರತ್ಯುತ್ತರಅಳಿಸಿ
  2. [ಮನೆಮಂದಿಯೇ ಮೊದಲು ಹೀಗಳೆಯುವವರು]
    ಇಷ್ಟೊಂದು ನೇರಮಾತು ಬೇಡ ನಾಗರಾಜ್.
    ಉಳಿದದ್ದೆಲ್ಲಾ ಅನುಭವಾಮೃತ.
    -ಶ್ರೀಧರ್

    ಪ್ರತ್ಯುತ್ತರಅಳಿಸಿ
  3. ನಿನ್ನ ದನಿಗೆ ನಾನೂ ದನಿಗೂಡಿಸಬಲ್ಲೇ ಅಷ್ಟೇ. ಸರಿಪಡಿಸಲಾಗದ್ದಕ್ಕೆ ಅನುಭವಿಸದೇ ಅನ್ಯ ಮಾರ್ಗವಿಲ್ಲ. ಕವನ ಚೆನ್ನಾಗಿ ಬಂದಿದೆ.

    ಪ್ರತ್ಯುತ್ತರಅಳಿಸಿ
  4. ನಿಮ್ಮ ಅನಿಸಿಕೆಯಂತೆ ಬದಲಾವಣೆ ಮಾಡಿರುವೆ, ಶ್ರೀಧರ್.

    ಪ್ರತ್ಯುತ್ತರಅಳಿಸಿ