ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಪೋಪುದೆ ಸಾವು |
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲವು |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ಫಲವಿಲ್ಲ ಮೂಢ||
-ಕ.ವೆಂ.ನಾಗರಾಜ್.
ಚಿಂತಿಸಿದೊಡೆ ಓಡಿ ಪೋಪುದೆ ಸಾವು |
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲವು |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ಫಲವಿಲ್ಲ ಮೂಢ||
-ಕ.ವೆಂ.ನಾಗರಾಜ್.
ಮಾರ್ಮಿಕವಾಗಿದೆ ಕವಿರತ್ನರೇ. ಬದುಕಿನ ನಿಜಾರ್ಥ ಇಲ್ಲಿ ಒಡ ಮೂಡಿದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು, ಬದರೀನಾಥರೇ.
ಅಳಿಸಿNagaraj sir avre, nimma ee kavanavannu hogalalu nannalli padagala korate ide, otnalli heluvudaadare, DVG avra reference kaanista ide..Tumba chennagide.. Keep it up sir, thanks again
ಪ್ರತ್ಯುತ್ತರಅಳಿಸಿಧನ್ಯವಾದಗಳು, ಸುಮುಖರವರೇ.
ಅಳಿಸಿ