ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಫೆಬ್ರವರಿ 7, 2011

ಅಂತಿಮ ವಿದಾಯ

     ಮಧ್ಯ ರಾತ್ರಿಯ ೧೨ ಘಂಟೆ ಇನ್ನೇನು ಸಮೀಪಿಸುತ್ತಿರುವ ಸಮಯದಲ್ಲಿ ಇದನ್ನು ಬರೆದಿರುವೆ. ಇನ್ನು ಕೆಲವೇ ಕ್ಷಣಗಳಲ್ಲಿ ನಾನು ನಿಮ್ಮೆಲ್ಲರಿಂದ ಶಾಶ್ವತವಾಗಿ ದೂರ ಹೋಗುತ್ತಿದ್ದೇನೆ. ಎಲ್ಲಾ ಮುಗಿಯಿತು. ನನ್ನನ್ನು ಮರೆತುಬಿಡಿ. ಹಾಯಾಗಿರಿ. ನನ್ನನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡದಿರಿ. ನೀವು ಬಯಸಿದರೂ ನಾನು ಇನ್ನೆಂದೂ ನಿಮಗೆ ಸಿಗುವುದಿಲ್ಲ ಮತ್ತು ನಿಮ್ಮ ಜೀವನದಲ್ಲಿ ಮತ್ತಿನ್ನೆಂದೂ ಪ್ರವೇಶಿಸುವುದಿಲ್ಲ. ನಾನು ವಿದಾಯ ಹೇಳುತ್ತಿರುವ ಸಮಯದಲ್ಲಿ ನೀವು ಗಾಢ ನಿದ್ದೆಯಲ್ಲಿದ್ದು ನಿಮ್ಮನ್ನು ಎಬ್ಬಿಸಿ ವಿದಾಯ ಹೇಳುವುದು ನನಗೆ ಸರಿಕಾಣಲಿಲ್ಲ. ನಿಮಗೆ ಎಚ್ಚರವಾಗಿ ನೋಡಿದಾಗ ನಾನಿಲ್ಲದಿರುವುದನ್ನು ಗುರುತಿಸುವಿರಿ. ತಪ್ಪು ತಿಳಿಯಬೇಡಿ. ನಾನು ನಿಮ್ಮನ್ನೆಲ್ಲಾ ತುಂಬಾ ಪ್ರೀತಿಸುತ್ತೇನೆ. ನಿಮ್ಮ ಮುಂದಿನ ದಿನಗಳು ಚೆನ್ನಾಗಿರಲಿ, ನಿಮಗೆ ಉಜ್ವಲ ಭವಿಷ್ಯವಿರಲಿ ಎಂದು ಮನತುಂಬಿ ಹಾರೈಸುತ್ತೇನೆ. ನಿಮಗೆ ಏನನ್ನಿಸುವುದೋ ಗೊತ್ತಿಲ್ಲ. ಚೆನ್ನಾಗಿರಿ ಎಂದು ಮತ್ತೊಮ್ಮೆ ಹೃದಯದುಂಬಿ ಬಯಸುವೆ.

ನಿಮ್ಮ ಒಲವಿನ,


'ಈದಿನ (TODAY)'

(ಸ್ಫೂರ್ತಿ: ನನಗೆ ಬಂದ ಒಂದು 'ಸಮೋಸ')

9 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಏನ್ರೀ ಇದು, ಗಾಭರಿಯಾಗಿ ಓದಿದೆ!
    ಬರೆಯೋದಕ್ಕೆ ಬೇರೆ ಹೊಳೀಲಿಲ್ವಾ?ನನ್ನ ಬ್ಲಾಗ್ ಲಿಂಕ್ ಒಮ್ಮೆ ನೋಡಿ ಆಗ ಗೊತ್ತಾಗುತ್ತೆ ಗಾಭರಿಗೆ ಕಾರಣ.

    ಪ್ರತ್ಯುತ್ತರಅಳಿಸಿ
  3. ನಿಜವಾಗಿಯೂ ನಾನು ತುಂಬ ಗಾಭರಿಯಾಗಿ ನಡುಗಿಬಿಟ್ಟೆ. 'ಆ ದಿನ' ಎಂದಿಗೂ ಬಾರದಿರಲಿ..

    ಪ್ರತ್ಯುತ್ತರಅಳಿಸಿ
  4. ನನಗೆ ಮಧ್ಯರಾತ್ರಿಯಲ್ಲಿ ಒಂದು ಎಸ್ಸೆಮ್ಮೆಸ್ ಈ ರೀತಿ ಬಂದಿತ್ತು. ನಾನೂ ಸಹ ಅದನ್ನು ಕಂಡು ಬೆಚ್ಚಿದ್ದೆ. ಅದನ್ನು ಆಧರಿಸಿ ಇದನ್ನು ಬರೆದೆ.ನಾನು ದುರ್ಬಲನಲ್ಲವಲ್ಲ ಎಂದು ಕೆಲವುಸಲ ಹೆಮ್ಮೆ ಪಟ್ಟುಕೊಳ್ಳುತ್ತಿರುತ್ತೇನೆ.

    ಪ್ರತ್ಯುತ್ತರಅಳಿಸಿ
  5. ಶ್ರೀ ನಾಗರಾಜ್ ಸರ್ ,
    ರಿಯಲಿ ವಂಡರ್ಫುಲ್.

    ವಾವ್, ಚರಮ ಗೀತೆಗಳನ್ನೂ ಊಹಿಸುವ, ರಚಿಸುವ, ಆಲಿಸುವ ,ಮಿಡಿಯುವ ನಿಮ್ಮ ಕವಿ ಹೃದಯಕ್ಕೆ ನನ್ನ hats off.

    ಈ ಬದುಕಲ್ಲಿ ಅದೆಷ್ಟು ಬಾರಿ ಜೀವ ಈ ಹಾಡ ಹೇಳಿದೆ., ಹೇಳಿ ನಡೆಯಲಾಗದ್ದು. ಎದ್ದು ಹೊರಟೆವೆಂದರೆ, ಅದೇನೂ ಹಿಡಿದೆಳೆಯುತ್ತೆ.

    ಶ್ರೀಮತಿ ಸರೂಜನಿ ನಾಯ್ಡು ರವರ ಒಂದು ಕವನ ನೆನಪಾಗುತ್ತೆ.
    ಸ್ವಲ್ಪ ತಡೆ . ಓ ಸಾವೇ,
    ಸ್ವಲ್ಪ ತಡೆ , ನಾನು ಸಾಯಲಾರೆ.
    ನನ್ನೆಲ್ಲ ಅರಳುವಾಸೆಗಳು ಕಟಾವಾಗಿಲ್ಲ
    ನನ್ನೆಲ್ಲ ಸಂತಸಗಳು ಸಂಗ್ರಹಗೊಂಡಿಲ್ಲ
    ನನ್ನೆಲ್ಲ ಹಾಡುಗಳನ್ನು ಹಾಡಿಲ್ಲ, ನನ್ನೆಲ್ಲ
    ಕಂಬನಿಗಳನ್ನು ಸುರಿಸಿಲ್ಲ.

    ಸ್ವಲ್ಪ ತಡೆ . ಓ ಸಾವೇ,
    ಪ್ರೇಮ ದುಃಖಗಳಲ್ಲಿ , ಭುಮ್ಯಾಕಾಶಗಳಲ್ಲಿ
    ನಾನು ಸಂತೃಪ್ತ ನಾಗುವತನಕ
    ನನ್ನೆಲ್ಲ ಮನದ ಕ್ಶುಧೆಗಳು ತೀರುವತನಕ
    ಓ ಸಾವೇ, ನಾನು ಸಾಯಲಾರೆ.
    ನಾನು ಸಾಯಲಾರೆ................



    ಒಮ್ಮೆ ತಿರುಗಿ ನೋಡಿದಾಗ ಎರಡು ವರ್ಷಗಳಹಿಂದೆ ಇಪ್ಪತ್ತು ದಿನ I C U ನಲ್ಲಿ ಮಲಗಿದ್ದ ನನ್ನ ತಂದೆಯ ಆ ಕಣ್ಣಿನಲ್ಲಿ ಕಂಡ ಭಾವದ ಸಾಲು ನಿಮ್ಮೀ ಬರಹದಲ್ಲಿ ಕಂಡದ್ದು. ಹೋಗಿಯೇ ಬಿಟ್ರು, ನಮ್ಮನ್ನೆಲ್ಲಾ ಬಿಟ್ಟು.

    ಬಾಲ್ಯದಲ್ಲಿ ಯಾವ ತಂದೆಯ ಎದೆಯ ಮೇಲೆ ಮಲಗಿ ಹಾಯಾಗಿ ನಿದ್ದೆ ಮಾಡಿದ್ದೇನೂ, ಅಲ್ಲಿಗೇ ಕೊಳ್ಳಿ ಇಟ್ಟ
    ನೆನಪು ಮಾಯುತ್ತಿಲ್ಲ. ...... ಎಲ್ಲಾ ಲೊಳಲೊಟ್ಟೆ.

    ಲಕ್ಷ್ಮೀನಾರಾಯಣರಾವ್
    ಮೈಸೂರು..

    ಪ್ರತ್ಯುತ್ತರಅಳಿಸಿ
  6. ಶ್ರಿ ಲಕ್ಷ್ಮೀನಾರಾಯಣರಾಯರೇ, ನಿಮ್ಮ ದೀರ್ಘ ಪ್ರತಿಕ್ರಿಯೆ ನನಗೆ ಸಂತಸ ನೀಡಿದೆ. ಹೃತ್ಪೂರ್ವಕ ವಂದನೆ.

    ಪ್ರತ್ಯುತ್ತರಅಳಿಸಿ