ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ
ಐದಲ್ಲ ಆರಲ್ಲ ಏಳಲ್ಲವೇ ಅಲ್ಲ |
ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ
ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..೨೮೯
ಚಲಿಸದೇ ಚಲಿಸುವನು ಅವನೊಬ್ಬನೇ
ನೋಡದೇ ನೋಡುವನು ಅವನೊಬ್ಬನೇ |
ಒಳಹೊರಗು ಎಲ್ಲೆಲ್ಲು ಅವನೊಬ್ಬನೇ
ನಿರಾಕಾರ ನಿರ್ವಿಕಾರ ಒಬ್ಬನೇ ಮೂಢ || ..೨೯೦
ದಾನಿಯೆಂದೆನುತ ಕೊರಳೆತ್ತಿ ನಡೆಯದಿರು
ತರಲಿಲ್ಲ ನೀನು ಕೊಡುವೆ ಮತ್ತೇನು |
ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ
ದಾನಿಗಳ ದಾನಿ ಒಬ್ಬನೇ ಮೂಢ || ..೨೯೧
ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ || ..೨೯೨
***********
-ಕ.ವೆಂ.ನಾಗರಾಜ್.
ಆಡುಮಾತಿನಲ್ಲಿ ಅನಾಯಾಸವಾಗಿ ಮೂಡಿಬರುತ್ತಿರುವ ಮೂಡ ಉವಾಚ
ಪ್ರತ್ಯುತ್ತರಅಳಿಸಿಉತ್ಕೃಷ್ಟ ತತ್ವದರ್ಶನದ ಪರಿಚಯ ಮಾಡುತ್ತಿದೆ. ಮೂಢರು ಯಾರು ಎಂಬುದೇ ಇಲ್ಲಿ ಪ್ರಶ್ನೆ?
ಉತ್ತಮ ಮತ್ತು ಸಂಗ್ರಹ ಯೋಗ್ಯ ಮೂಢ ಉವಾಚ.
ವಂದನೆಗಳು,
ಪ್ರಕಾಶ್
ಧನ್ಯವಾದಗಳು, ಪ್ರಕಾಶರೇ. ಇಲ್ಲಿ ಮೂಢ ನಾನೇ! ಹೇಳಿಕೊಳ್ಳುತ್ತಿರುವುದು ನನಗೇ!!
ಪ್ರತ್ಯುತ್ತರಅಳಿಸಿ