ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 15, 2012

ಮೂಢ ಉವಾಚ - 84


ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ
ಐದಲ್ಲ ಆರಲ್ಲ ಏಳಲ್ಲವೇ ಅಲ್ಲ |
ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ
ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..೨೮೯


ಚಲಿಸದೇ ಚಲಿಸುವನು ಅವನೊಬ್ಬನೇ
ನೋಡದೇ ನೋಡುವನು ಅವನೊಬ್ಬನೇ |
ಒಳಹೊರಗು ಎಲ್ಲೆಲ್ಲು ಅವನೊಬ್ಬನೇ
ನಿರಾಕಾರ ನಿರ್ವಿಕಾರ ಒಬ್ಬನೇ ಮೂಢ || ..೨೯೦


ದಾನಿಯೆಂದೆನುತ ಕೊರಳೆತ್ತಿ ನಡೆಯದಿರು
ತರಲಿಲ್ಲ ನೀನು ಕೊಡುವೆ ಮತ್ತೇನು |
ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ 
ದಾನಿಗಳ ದಾನಿ ಒಬ್ಬನೇ ಮೂಢ || ..೨೯೧


ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ || ..೨೯೨
***********
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಆಡುಮಾತಿನಲ್ಲಿ ಅನಾಯಾಸವಾಗಿ ಮೂಡಿಬರುತ್ತಿರುವ ಮೂಡ ಉವಾಚ
    ಉತ್ಕೃಷ್ಟ ತತ್ವದರ್ಶನದ ಪರಿಚಯ ಮಾಡುತ್ತಿದೆ. ಮೂಢರು ಯಾರು ಎಂಬುದೇ ಇಲ್ಲಿ ಪ್ರಶ್ನೆ?

    ಉತ್ತಮ ಮತ್ತು ಸಂಗ್ರಹ ಯೋಗ್ಯ ಮೂಢ ಉವಾಚ.
    ವಂದನೆಗಳು,
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ಪ್ರಕಾಶರೇ. ಇಲ್ಲಿ ಮೂಢ ನಾನೇ! ಹೇಳಿಕೊಳ್ಳುತ್ತಿರುವುದು ನನಗೇ!!

    ಪ್ರತ್ಯುತ್ತರಅಳಿಸಿ