ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ನವೆಂಬರ್ 16, 2012

ಕರ್ಣಾಟಕವನ್ನು ಆಳಿದ್ದ ರಾಜಮನೆತನಗಳ ವಿವರ



ಅವಧಿ - ರಾಜವಂಶ -  ಪ್ರಮುಖ ರಾಜರು (ಅನುಕ್ರಮವಾಗಿ)
3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು -ಶ್ರೀಮುಖ, ಗೌತಮಿಪುತ್ರ
ಕ್ರಿ.ಶ.325-540- ಕದಂಬರು - ಮಯೂರವರ್ಮ
325-999 -                            ಗಂಗರು -  ಅವಿನೀತ, ದುರ್ವಿನೀತ, ರಾಚಮಲ್ಲ
500-757 - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
757-923 -                            ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
973-1198 - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
1198-1312 -                        ದೇವಗಿರಿ ಯಾದವರು  - ಸಿಂಗಾಹನ
1000-1346 -                      ಹೊಯ್ಸಳರು - ವಿಷ್ಣುವರ್ಧನ
1336-1565 ವಿಜಯನಗರದ ಅರಸರು - ಕೃಷ್ೞದೇವರಾಯ
1347-1527 - ಬಹಮನಿ ಸುಲ್ತಾನರು - ಮಹಮದ್ ಷಾ ೧,೨
1490-1686  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್  ಷಾ, ಇಬ್ರಾಹಿಮ್ ಆದಿಲ್ ಷಾ
1500-1762- ಕೆಳದಿಯ ಅರಸರು - ಚೌಡಪ್ಪನಾಯಕ, ಸದಾಶಿವನಾಯಕ,ರಾಣಿ ಚನ್ನಮ್ಮ, ಶಿವಪ್ಪನಾಯಕ ಮುಂತಾದವರು
1399-1761 - ಮೈಸೂರು ಒಡೆಯರು -  ರಣಧೀರ ಕಂಠೀರವ, ಚಿಕ್ಕದೇವರಾಯ
1761-1799 - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
1800-1831 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
1800 -                              ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಿಹೋಯಿತು.
1831-1881  ಬ್ರಿಟಿಷರು -  ಆಂಗ್ಲರ ಆಧಿಪತ್ಯ
1881-1950 - ಮೈಸೂರು ಒಡೆಯರು -  ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
೧೯೫೬ - ಇಂದಿನ ಕರ್ನಾಟಕದ ರಚನೆ
 ******************************
'ಕೆಳದಿ ನೃಪವಿಜಯ'ದಲ್ಲಿ ಬರುವ ಕರ್ಣಾಟಕದ ವರ್ಣನೆ

ಇಂತೆಸೆವ ಭರತಖಂಡದ ತೆಂಕಣಾಶಾಭಾಗದೊಳ್  ನಾನಾವಿಧವರ್ಣಾಶ್ರಮಸುಖಸಂಪತ್ಸಮಾಜಕಾಸ್ಪದಮೆನಿಸಿ
ಮೆರೆವ   ಕನ್ಯಾಖಂಡಪ್ರದೇಶದೊಳ್
     ಅಗಣಿತತೀರ್ಥ ನದೀಜದ
     ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮೂ
     ಹಗಳಿಗೆಡೆಯೆನಿಸಿ ಮಿಗೆ ಝಗ
     ಝಗಿಪುದು ಸಹ್ಯಾಚಲಂ ಮಹಾಸುಖಮೂಲಂ                   
          ಆ ಸಹ್ಯಾದ್ರಿಯೊಳೊಪ್ಪುವ
          ದೇಶಂಗಳೊಳಧಿಕಮೆನಿಸಿ ನಿರುಪಮಲಕ್ಷ್ಮೀ
          ಕೋಶಂ ವಿಲತ್ಪುಣ್ಯನಿ
           ವೇಶಂ ಕರ್ಣಾಟಕದೇಶಮುರೆ ರಂಜಿಸುಗುಂ              
     ಕೆರೆಯಿಂ ಕಾಳ್ಪುರದಿಂ ಕನತ್ಕುವಲಯಾಂಭೋಜಂಗಳಿಂ ಶೋಭಿಪೊ
     ಳ್ಸರದಿಂ ಪುಷ್ಪಲತಾಪ್ರತಾನ ಲಸದಾರಾಮ ಪ್ರದೇಶಂಗಳಿಂ
     ತೊರೆಂ ರಾಜಿಪ ಗಂಧಶಾಲಿವನದಿಂ ಕ್ರೀಡಾದ್ರಿಯಿಂ ಕಣ್ಗೆ ಭಾ
     ಸುರಮಾಗಿರ್ದುದು ದೇಶಮುನ್ನತಸುಖಾವಾಸಂ ದಲೇಂ ವರ್ಣಿಪೆಂ  

11 ಕಾಮೆಂಟ್‌ಗಳು:

  1. ಇತಿಹಾಸ ಸಂಶೋಕರಿಗೆ, ವಿದ್ಯಾರ್ಥಿಗಳಿಗೆ, ಪತ್ರಕರ್ತ ಮಿತ್ರರಿಗೆ ಿದು ಸಂಗ್ರಹಯೋಗ್ಯ ಮಾಹಿತಿ..ತಮಗೆ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ಎಲ್ಲರೂ ತಿಳಿದು ಕೊಳ್ಳಬೇಕಾದ ಇತಿಹಾಸದ ಉತ್ತಮ ಮಾಹಿತಿಯನ್ನು ಕೊಟ್ಟಿದಿರ. ಇದರಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಎಲ್ಲರಿಗೂ ಸಹ ತುಂಬ ಉಪಯುಕ್ತವಾಗುತದೆ.. ನಿಮಗೆ ಧನ್ಯವಾದಗಳು ಸರ್ ...

    ಪ್ರತ್ಯುತ್ತರಅಳಿಸಿ
  3. ಎಲ್ಲರೂ ತಿಳಿದು ಕೊಳ್ಳಬೇಕಾದ ಇತಿಹಾಸದ ಉತ್ತಮ ಮಾಹಿತಿಯನ್ನು ಕೊಟ್ಟಿದಿರ. ಇದರಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಎಲ್ಲರಿಗೂ ಸಹ ತುಂಬ ಉಪಯುಕ್ತವಾಗುತದೆ.. ನಿಮಗೆ ಧನ್ಯವಾದಗಳು ಸರ್ ...

    ಪ್ರತ್ಯುತ್ತರಅಳಿಸಿ
  4. ನನ್ನ ನೆಚ್ಚಿನ ವಿಭಾಗ ಇತಿಹಾಸ, ಅದರಲ್ಲೂ ಕರ್ನಾಟಕ, ನನ್ನ ದಾಹ ತೀರಿಸುವ ಬರಹ ಇದು.

    ಪ್ರತ್ಯುತ್ತರಅಳಿಸಿ