ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 20, 2012

ಕಾರ್ಯಕ್ರಮಕ್ಕೆ ಆಹ್ವಾನ - ತಪ್ಪದೇ ಬನ್ನಿ

ಆದರ್ಶದ ಬೆನ್ನು ಹತ್ತಿ . . .

     1975-77ರ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿನ ಒಂದು ಕರಾಳ ಅಧ್ಯಾಯ. ಆ ಸಂದರ್ಭದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನೂ ಸಹ ಸರ್ಕಾರದ ವಿರುದ್ಧ ಸೊಲ್ಲೆತ್ತದಿರುವಂತಹ ಸನ್ನಿವೇಶವಿತ್ತು. 1970ರ ದಶಕದ ನಂತರ ಜನಿಸಿದವರಿಗೆ ಅದರ ಅರಿವು ಇರಲಾರದು. ತುರ್ತು ಪರಿಸ್ಥಿತಿಯ ಬಲಿಪಶುಗಳಲ್ಲೊಬ್ಬನಾಗಿ ಅನುಭವಿಸಿದ ಕಷ್ಟ-ನಷ್ಟಗಳು, ಪಡೆದ ಅನುಭವಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ದಿನಾಂಕ 29-11-2012ರ ಗುರುವಾರದಂದು ಹಾಸನದ ರವೀಂದ್ರನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಸಾ. 6-00ಕ್ಕೆ "ಆದರ್ಶದ ಬೆನ್ನು ಹತ್ತಿ . . ." ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಪುಸ್ತಕಕ್ಕೆ ರಾ.ಸ್ವ.ಸಂಘದ ಅಖಿಲ ಭಾರತ ಮಟ್ಟದ ಹಿರಿಯ ಪ್ರಚಾರಕರಾದ ಸನ್ಮಾನ್ಯ ಶ್ರೀ ಸು. ರಾಮಣ್ಣನವರು ಮುನ್ನುಡಿ ಬರೆದಿದ್ದಾರೆ. ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಆಂತರಿಕ ಭದ್ರತಾ ಶಾಸನದ (ಮೀಸಾ) ಅನ್ವಯ ಬಂದಿಯಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು  ಪುಸ್ತಕದ ಲೋಕಾರ್ಪಣೆ ಮಾಡಲಿದ್ದಾರೆ.
     ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದ್ದವರ ಸಮಾವೇಶ ಅದೇ ದಿನ ಮ. 4-00 ರಿಂದ 6-00 ರವರೆಗೆ ನಡೆಯಲಿದೆ. 
      ತಾವು ಈ ಸಮಾರಂಭಕ್ಕೆ ಬರಬೇಕೆಂಬುದು ನನ್ನ ಅಪೇಕ್ಷೆ. ದಯಮಾಡಿ ಬನ್ನಿ. ಆಹ್ವಾನ ಪತ್ರಿಕೆ ಇದೋ ಇಲ್ಲಿ: 

-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. ಎಲ್ಲಾ ಮಿತ್ರರೂ ಪಾಲ್ಗೊಳ್ಳಬೇಕೆಂಬುದು ನನ್ನ ಅಪೇಕ್ಷೆ ಕೂಡ. ಕವಿ ನಾಗರಾಜರ ಜೊತೆಯಲ್ಲಿ ನಿಮ್ಮನ್ನು ಸ್ವಾಗತಿಸಲು ನಾನೂ ಇರುವೆ.[ಪಿಪೀಲಿಕೆ]
    -ಹರಿಹರಪುರಶ್ರೀಧರ್

    ಪ್ರತ್ಯುತ್ತರಅಳಿಸಿ
  2. ಆತ್ಮೀಯ ನಾಗರಾಜರೆ,
    ನಿಮ್ಮಿಂದ ರಚಿತವಾದ " ಆದರ್ಶದ ಬೆನ್ನು ಹತ್ತಿ ....." ಪುಸ್ತಕದ ಬಿಡುಗಡೆ ಕಾರ್ಯಕ್ರಮದ ಬಗ್ಗೆ ತಿಳಿಯಿತು, ತುಂಬಾ ಸಂತೋಷವಾಯಿತು. ನನ್ನ ಅಣ್ಣನ ಮಗಳ ಮದುವೆ ಮೈಸೂರಿನಲ್ಲಿ ನಡೆಯುತ್ತಿರುವ ಕಾರಣ ನಾನು ಮೈಸೂರಿಗೆ ಹೋಗುತ್ತಿರುವೆ. ಈ ಕಾರಣದಿಂದ ನಾನು ಕಾರ್ಯಕ್ರಮಕ್ಕೆ ನಾನು ಬರಲಾಗುತ್ತಿಲ್ಲ. ದಯಮಾಡಿ ಕ್ಷಮಿಸಿ. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲೆಂದು ಹಾರೈಸುತ್ತೇನೆ.
    ಧನ್ಯವಾದಗಳು
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  3. ಪೂಜ್ಯ ರೆ ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಹುಶಃ ಬರಲಾಗುವುದಿಲ್ಲ ,ಆದರೆ ಆಹ್ವಾನಕ್ಕೆ ದನ್ಯವಾದಗಳು .ನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಚೆನ್ನಾಗಿ ನಡೆಯಲಿ ಹಾಗು ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ