ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಆಗಸ್ಟ್ 1, 2012

ಮೂಢ ಉವಾಚ - 87


ಚಿತ್ತವದು ದೂರವಿರೆ ರೂಪ ರಸ ಗಂಧದಿಂ
ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ |
ನಿಂತೀತು ಮನವು ದೇವಸಾಮೀಪ್ಯದಲಿ
ಭಕ್ತಿಯೇ ಸಾಧನವು ಇದಕೆ ಮೂಢ || ..301


ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ || ..302


ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು
ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು |
ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು
ನಿತ್ಯನೂತನ ಶಕ್ತಿ ಭಕ್ತಿ ಮೂಢ || ..303


ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ
ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |
ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ || ..304
**************
-ಕ.ವೆಂ.ನಾಗರಾಜ್.

4 ಕಾಮೆಂಟ್‌ಗಳು:

 1. ನೂರು ದಾಡಿದ ದಿನವ ಮರೆತಿಲ್ಲ
  ಇನ್ನೂರು ಅದ್ದದ್ದು ಗೊತ್ತಾಗಲಿಲ್ಲ
  ಮುನ್ನೂರು ದಾಟಿಹುದು ಮೂಡ ಸಂತತಿಯು
  ಸಾವಿರ ಮೂಢರು ಬಂದೆಬರುವರು ನೋಡ||

  ಪ್ರತ್ಯುತ್ತರಅಳಿಸಿ
 2. ಇಷ್ಟು ದಿನ ಈ ಬ್ಲಾಗ್ ಓದದ ನಿಜವಾದ ಮೂಢ ನಾನೇ ಸಾರ್. ಇಡೀ ಬ್ಲಾಗನ್ನು ಮತ್ತೊಮ್ಮೆ ಓದುತ್ತೇನೆ. ಮನೋಚಿಕಿತ್ಸಕ ತತ್ವಪದಗಳಿವು.

  ನನ್ನ ಬ್ಲಾಗಿಗೂ ಸ್ವಾಗತ.
  www.badari-poems.blogspot.com

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಮ ಬದರಿನಾಥರೇ. ನಿಮ್ಮ ಬ್ಲಾಗಿಗೂ ಭೇಟಿ ಕೊಡುತ್ತಿರುತ್ತೇನೆ.

   ಅಳಿಸಿ