ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಡಿಸೆಂಬರ್ 11, 2012

ಬಿದನೂರು ಕೋಟೆಯ ಅಳಲು ಕೇಳಿ!

     ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ' ಎಂದು ಇವು ಹೇಳುತ್ತಿವೆ. ಈ ಬಿದನೂರು ಕೋಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಎಂಬಲ್ಲಿದೆ. ಹೊಸನಗರದಿಂದ  17 ಕಿ.ಮೀ. ದೂರದಲ್ಲಿರುವ ಈ ಸ್ಥಳ ಇತಿಹಾಸ ಪ್ರೇಮಿಗಳು ಸಂದರ್ಶಿಸಬೇಕಾದ ಸ್ಥಳ. ದರ್ಬಾರ್ ಸಭಾಂಗಣದ ಚಿತ್ರವನ್ನೂ ನಾನು ಸೆರೆ ಹಿಡಿಯಬೇಕಿತ್ತು. ಮುಂದೊಮ್ಮೆ ಅವಕಾಶವಾದರೆ  ತೆಗೆಯುವೆ.  ಆ ಸಭಾಂಗಣದಲ್ಲಿ ಕಟ್ಟೆ ಒಂದನ್ನು ಬಿಟ್ಟು ಈಗ ಏನೂ ಉಳಿದಿಲ್ಲ, ನಮ್ಮವರು 'ಉಳಿಸಿಲ್ಲ'! 
-ಕ.ವೆಂ.ನಾಗರಾಜ್.


1 ಕಾಮೆಂಟ್‌:

  1. ನಿಮ್ಮ ಸಂಗ್ರಹಕ್ಕೆ ಕೋಟಿ ನಮನ...ಕೊನೇ ಪಕ್ಷ ಚಿತ್ರದಲ್ಲಾದರೂ ನೋಡೋ ಭಾಗ್ಯ ನಮ್ಮ ಮುಂದಿನ ಪೀಳಿಗೆಗೆ ಸಿಗುತ್ತದಲ್ಲಾ!

    ಪ್ರತ್ಯುತ್ತರಅಳಿಸಿ