ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮಾರ್ಚ್ 28, 2013

ನಾನು


ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು
ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||

ಸಾಯಲಾರದ ನಾನು ಬದುಕಲಾರದ ನಾನು
ನಾನಾ ಸಂತೆಯಲಿ ಸರಕಾದ ನಾನು
ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು
ಕಣ್ಣಿದ್ದು ಕಾಣದಾ ಕುರುಡನೇ ನಾನು || ೧ ||

ಅವನಿಗೆ ಅವ ನಾನು ಇವನಿಗೆ ಇವ ನಾನು
ಅವನಿಯೊಳಾಳ್ವಿಕೆ ಮಾಡಿಹುದೇ ನಾನು
ನಾನು ನಾನೆನುತ ಅವಿರತ ಸೆಣಸಾಡಿ
ನರರು ಹತರಾಗಿ ಗೆದ್ದಿದ್ದೆ ನಾನು || ೨ ||

ಬಗೆ ಬಗೆ ಮುಖವಾಡ ಧರಿಸಿಕೊಂಡಿಹ ನಾನು
ಒಳ ನಾನು ಮರೆಯಾಗಿ ನರಳಿದ್ದೇ ನಾನು
ಕಪಟ ಬಂಧವ ಮುರಿದು ಹೊರಬರಲು ನಾನು
ಉದ್ಧಾರವಾದದ್ದೇ ನಿಜ ನಾನು ನಾನು || ೩ ||
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. [ಅವನಿಗೆ ಅವ ನಾನು ಇವನಿಗೆ ಇವ ನಾನು]

    [ಬಗೆ ಬಗೆ ಮುಖವಾಡ ಧರಿಸಿಕೊಂಡಿಹ ನಾನು]....... ಈ ಎರಡೂ ಸಂದರ್ಭದಲ್ಲಿ ನಾನು ಸತ್ತು ಹೋಗಿರುತ್ತೆ ಅಲ್ವಾ?

    ಪ್ರತ್ಯುತ್ತರಅಳಿಸಿ
  2. 'ನಾನು' ಸತ್ತರೆ 'ನಾನು' ಬದುಕುತ್ತದೆ! ಧನ್ಯವಾದ, ಶ್ರೀಧರ್.

    ಪ್ರತ್ಯುತ್ತರಅಳಿಸಿ