ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 12, 2011

ಮೂಢ ಉವಾಚ - 48 ;ವಿಷಯಲೋಲುಪತೆ

ವಿಷಯಲೋಲುಪತೆ
ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||


ವಿಷಯಾಭಿಧ್ಯಾನ ತರದಿರದೆ ಅಧ್ವಾನ
ಕಂಡು ಕೇಳಿದರಲಿ ಬರುವುದನುರಾಗ|
ಬಯಕೆ ಫಲಿಸದೊಡೆ ಕೋಪದುದಯ
ಕೋಪದಿಂ ಅಧೋಗತಿಯೆ ಮೂಢ||


ವಿಷಯಮಾರ್ಗದಿ ನಡೆದು ಮಲಿನರಾದವರ
ಹಿಂಬಾಲಿಸದೆ ಹೆಜ್ಜೆ ಹೆಜ್ಜೆಗೆ ಮಿತ್ತು ಪತನ |
ಯುಕ್ತಮಾರ್ಗದಿ ನಡೆದು ವಿವೇಕಿಯಾದೊಡೆ
ಅನುಸರಿಸುವುದು ಫಲಸಿದ್ಧಿ ಮುಕ್ತಿ ಮೂಢ|


ಚಪಲತೆ
ಚಿತ್ತ ಚಪಲತೆಯಿಂ ಚಿತ್ತ ಚಂಚಲತೆ
ಚಿತ್ತ ಚಂಚಲತೆಯಿಂ ಚಿತ್ತ ತಳಮಳವು |
ತಳಮಳ ಕಳವಳ ಹಾಳುಗೆಡವದೆ ಶಾಂತಿ
ಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||
*****************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ