ಕೆಟ್ಟವರಿರಬೇಕ . . ಜಗದಿ. . ಕೆಟ್ಟವರಿರಬೇಕ. .
ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. .
ರಕ್ಕಸರಿರಬೇಕ . . ಹಿಂಸೆಯು
ಮಿತಿಯ ಮೀರಬೇಕ . .
ಸುಮ್ಮನೆ ಕುಳಿತಿಹ ಸಜ್ಜನ
ಶಕ್ತಿ ಮೇಲೆ ಏಳಲಾಕ . .
ರಾವಣರಿರಬೇಕ . . ನೀತಿಯು
ಶೋಕಿಸುತಿರಬೇಕ . .
ರಾಮರು ಬಂದು ಶಿರಗಳ ತರಿದು
ನ್ಯಾಯವ ತರಲಾಕ . .
ಕಷ್ಟವು ಬರಬೇಕ . . ಬಂದು
ನಷ್ಟವ ತರಬೇಕ . .
ಕಷ್ಟ ನಷ್ಟಗಳು ಜೀವವ ಮಾಗಿಸಿ
ದೇವನ ನೆನಿಲಾಕ . .
ಸೋಲು ಕಾಡಬೇಕ . . ಸೋತು
ಸುಣ್ಣವಾಗಬೇಕ . .
ಸೋಲನು ಮೆಟ್ಟಿ ಗೆಲ್ಲುವ
ಛಲವೆ ನಮ್ಮದಾಗಬೇಕ . .
ಬೆಂಕಿ ಚಿಮ್ಮಬೇಕ . . ಚಿಮ್ಮಿ
ಕೆಡುಕ ನುಂಗಬೇಕ. .
ಜಲವು ಉಕ್ಕಬೇಕ . . ಪಾಪವ
ಮುಕ್ಕಿ ಮುಗಿಸಲಾಕ . .
***********
-ಕ.ವೆಂ.ನಾಗರಾಜ್.
Very nice poem in Dharwad kannada style.
ಪ್ರತ್ಯುತ್ತರಅಳಿಸಿಧನ್ಯವಾದ, ಜಗದೀಶಚಂದ್ರರೇ.
ಪ್ರತ್ಯುತ್ತರಅಳಿಸಿಆತ್ಮೀಯ ನಾಗರಾಜರೆ,
ಪ್ರತ್ಯುತ್ತರಅಳಿಸಿಜಗ ಹುಟ್ಟಿದ ದಿನದಿಂದ ಕೆಟ್ಟದು ಒಳಿತು ಇದ್ದೆ ಇವೆ. ಕೆಲ ಸಮಯ ಇದು ಜಾಸ್ತಿ, ಅದು ಕಡಿಮೆ. ಇದು ಜಾಸ್ತಿಯಾದಾಗ ಅದು ಬರುತ್ತೆಂಬ ಆಸೆ. ದೇವನ ತಕ್ಕಡಿಯಲ್ಲಿ ಯಾವಾಗಲು ಕೆಲವು ಮೇಲೆ ಕೆಲವು ಕೆಳಗೆ.ಹೀಗಾಗಿ ಸಮತೋಲನ.ಇದನ್ನು ನಾವು ನೋಡುವ ದೃಷ್ಟಿಯಲ್ಲೂ ವ್ಯತ್ಯಾಸವಿದೆ. ದೃಷ್ಟಿದೋಷ ನಿವಾರಣೆಯಾದಲ್ಲಿ ಕೆಟ್ಟದ್ದರಲ್ಲೂ ಒಳಿತು ಕಾಣಬಹುದಾದ ಮನಸ್ಥಿತಿ ಲಭ್ಯ. ಇಂತಹ ಸ್ಥಿತಿಯ ಒಂದು ಸುಂದರ ಸರಳ ಕವನ.
ಧನ್ಯವಾದಗಳು
ಪ್ರಕಾಶ್
ಧನ್ಯವಾದ, ಪ್ರಕಾಶರೇ. ಶ್ರೀಧರರ ಪ್ರಸ್ತಾಪಕ್ಕೆ ನನ್ನ ಒತ್ತು ಇದೆ. :)
ಅಳಿಸಿಉತ್ತಮವಾದ ಕವನ. ಪ್ರಕಾಶ್ ಮನಸ್ಸು ಮಾಡಿದರೆ ರಾಗಹಾಕಿ ಹಾಡಿ ಆಡಿಯೋ ಪ್ರಕಟಿಸಬಹುದು.
ಪ್ರತ್ಯುತ್ತರಅಳಿಸಿವಂದನೆ, ಶ್ರೀಧರ್. ನಿಮ್ಮ ಮಾತಿಗೆ ನಾನು ಸಹಮತನಿದ್ದೇನೆ.
ಅಳಿಸಿಪ್ರಕಾಶ್ ಹಾಡಬೇಕಾ
ಪ್ರತ್ಯುತ್ತರಅಳಿಸಿಹಾಡನು ಕೇಳುತ ಕುಣಿಯಬೇಕಾ
ಕುಣಿದು ಕುಣಿದು ಮನ
ತಣಿದು ತಣಿದು ತನುವ ಮರೆಯಬೇಕಾ
ಮರೆತು ನಾನು ಅಳಿಯಬೇಕಾ||
ಆತ್ಮೀಯ ನಾಗರಾಜ್ ಮತ್ತು ಶ್ರೀಧರ್,
ಪ್ರತ್ಯುತ್ತರಅಳಿಸಿನಿಮ್ಮ ಅಭಿಮಾನಕ್ಕೆ ನಾನು ಕೃತಜ್ಞ. ರಾಗ ಹಾಕಿ ಹಾಡುವ ಸದವಕಾಶವನ್ನು ನಾನು ಖಂಡಿತ ಕಳೆದುಕೊಳ್ಳಲಾರೆ. ಈ ಅವಕಾಶಕ್ಕೆ ಕಾಯುವೆ.
ಧನ್ಯವಾದಗಳು
ಪ್ರಕಾಶ್
ಮನಮುಟ್ಟುವ೦ತಿದೆ......
ಪ್ರತ್ಯುತ್ತರಅಳಿಸಿಧನ್ಯವಾದಗಳು, ಪ್ರೇರಣಾರವರೇ.
ಅಳಿಸಿಉತ್ತಮವಾದ ಕವನ.
ಪ್ರತ್ಯುತ್ತರಅಳಿಸಿವಂದನೆಗಳು, ಕುಮಾರರೇ.
ಪ್ರತ್ಯುತ್ತರಅಳಿಸಿ