ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಏಪ್ರಿಲ್ 27, 2012

ಮಕ್ಕಳು ಆಚರಿಸಿದ ಬಸವ ಜಯಂತಿ

     ಬಸವ ಜಯಂತಿಯ ಹಿಂದಿನ ದಿನ ಮೊಮ್ಮಗಳು ಅಕ್ಷಯ 'ಬಸವ ಜಯಂತಿ' ಅಂದರೇನು ತಾತಾ? ಎಂದು ಪ್ರಶ್ನಿಸಿದಾಗ ಅವರೊಬ್ಬರು ನಮ್ಮ ದೇಶದ ಮಹಾಪುರುಷರು, ನಾಳೆ ಅವರ ಜನ್ಮದಿನ ಎಂದು ಹೇಳಿದೆ. ನಾವೂ ಅವರ ಬರ್ತ್ ಡೇ ಮಾಡೋಣ ಎಂದಾಗ 'ಆಗಲಿ, ನಿನ್ನ ಸ್ನೇಹಿತರನ್ನೆಲ್ಲಾ ಕರಿ, ಒಟ್ಟಿಗೇ ಮಾಡೋಣ' ಎಂದಾಗ ಅವಳಿಗೆ ಖುಷಿಯೋ ಖುಷಿ. ಬೆಳಿಗ್ಗೆ ಬೇಗ ಎದ್ದು  ಸ್ನಾನ ಮುಗಿಸಿ ತನ್ನ ಸ್ನೇಹಿತರನ್ನೆಲ್ಲಾ ಸೇರಿಸಿಯೇ ಬಿಟ್ಟಳು. ಬಸವಣ್ಣನವರ ಫೋಟೋ ಕೊಟ್ಟಾಗ ಅವಳು, ಅವಳ ಸ್ನೇಹಿತರೇ ಸೇರಿ ಅಲಂಕಾರ ಮಾಡಿದರು.  ದೀಪ ಹಚ್ಚಿ, ಹೂವು ಏರಿಸಿ, ಗಂಧದ ಕಡ್ಡಿಗಳನ್ನು ಬೆಳಗಿ ಸಂಭ್ರಮಿಸಿದರು. ತಾತ, ಅಜ್ಜಿ  ಹೇಳಿದಂತೆ ಮಾಡಿದ ಆ ಪುಟ್ಟ ಮಕ್ಕಳ ಸಂಭ್ರಮದ ಘಳಿಗೆಗಳನ್ನು ಸೆರೆಹಿಡಿದಿರುವೆ. ಈ ಕೆಳಗಿನ ಆರು ವಿಡಿಯೋಗಳ ಒಟ್ಟು ಅವಧಿ ಕೇವಲ 6-7 ನಿಮಿಷಗಳಷ್ಟೆ. ಅವರ ಖುಷಿ ಮಾತ್ರ ಬೆಟ್ಟದಷ್ಟು. ನೀವೂ ಅವರ ಸಂಭ್ರಮದಲ್ಲಿ ಪಾಲುದಾರರಾಗುವಿರಾ?

ದೀಪ ಹಚ್ಚಿದರು:
           
ಅಕ್ಷಯಳ ಪ್ರಾರ್ಥನೆ
           

ಸುಮನ್ವಿತಾಳಿಂದ ಸಂದೇಶ
          

ನಿತಿನ್ ಹಾಡಿದ ವಚನ
           

ಅಕ್ಷಯಳಿಂದ ವಚನ
           

ಕೊನೆಯಲ್ಲಿ ಬೀದಿಯಲ್ಲಿ ಘೋಷಣೆಗಳೊಡನೆ ಪುಟ್ಟ ಮೆರವಣಿಗೆ
           
     ನಂತರ ಆಟೋಟಗಳನ್ನು ಮುಗಿಸಿ ಅಜ್ಜಿ, ತಾತ ಕೊಟ್ಟ ಬಹುಮಾನ, ಪ್ರಸಾದ ಪಡೆದ ಮಕ್ಕಳು ಇಟ್ಟ ಕೋರಿಕೆ:
 "ನಾಡಿದ್ದು  'ಶಂಕರ ಜಯಂತಿ'ಯಂತೆ. ಅದನ್ನೂ ಮಾಡೋಣವಾ?"

6 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜ್ರವರೆ,
    ಮಕ್ಕಳಿಗೆ ಒಂದು ಪ್ರಾಯೋಗಿಕ ಕಮ್ಮಟವನ್ನು ಮಾಡಿ ಅವರ ಉತ್ಸಾಹ ಮತ್ತು ಸಂತೋಷವನ್ನು ಇಮ್ಮಡಿ ಗೊಳಿಸಿ ಬಿಟ್ಟಿರಿ. ನಿಜವಾಗಿ ಬೇಕಾದ ಕಸರತ್ತು. ನಿಜಕ್ಕೂ ತುಂಬಾ ಖುಷಿಯಾಗುತ್ತ ಇದೆ. ನಿಮ್ಮ ಸಮಯೋಚಿತ ಕಾರ್ಯೋನ್ಮುಖತೆಗೆ ಹಾಟ್ಸ್ ಆಫ್.
    ಪ್ರಕಾಶ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಈ ಕಾರ್ಯಕ್ರಮ ಮತ್ತು ನಿಮ್ಮ ಅನಿಸಿಕೆ ಎರಡೂ ನನಗೆ ಸಂತೋಷ ನೀಡಿವೆ. ಧನ್ಯವಾದ, ಪ್ರಕಾಶರೇ.

      ಅಳಿಸಿ
  2. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ತುಂಬಾ ಸಂತೋಷವಾಯಿತು.

    ಪ್ರತ್ಯುತ್ತರಅಳಿಸಿ