ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಏಪ್ರಿಲ್ 2, 2012

ಜಗತ್ತು ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು!! ಹೇಗೆ??

     ಈ ಜಗತ್ತು, ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು, ನಮಗೆ ಈ ಪ್ರಪಂಚ ಸಹನೀಯವೆನಿಸಬೇಕು, ಎಂಬುದೇ ನಮ್ಮ, ನಿಮ್ಮ, ಎಲ್ಲರ ಆಸೆ, ಆಕಾಂಕ್ಷೆ. ಆದರೆ, ಅದು ಹೇಗೆ? ಸಮಾಜವನ್ನು ಬದಲಿಸಬಹುದಾದ, ಬದಲಿಸಬೇಕಾದ ಸಮಾಜ ಸುಧಾರಣೆಯ ಪ್ರಾರಂಭ ಎಲ್ಲಿಂದ ಆಗಬೇಕು? ಕೇಳಿ,  ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಹೀಗಿದೆ:
[ಶ್ರೀ ಶರ್ಮರವರ ನಿವಾಸದಲ್ಲಿ ಚರ್ಚಿಸಿದ ಸಂದರ್ಭದಲ್ಲಿ ದಾಖಲಿಸಿಕೊಂಡದ್ದು].
-ಕ.ವೆಂ.ನಾಗರಾಜ್.

5 ಕಾಮೆಂಟ್‌ಗಳು:

  1. ನೀವು ಹಿಂದೊಮ್ಮೆ ಶ್ರೀ ಸುಧಾಕರ ಶರ್ಮರವರಿಗೆ ನೂರು ವಯಸಾಗಿದೆ ಎಂದು ಬರೆದಂತೆ ನೆನಪು ಸಂಪದದಲ್ಲಿ ಅಥವ ನನ್ನ ನೆನಪೆ ತಪ್ಪೊ ಗೊತ್ತಿಲ್ಲ ಆದರೆ ವೀಡಿಯೋದಲ್ಲಿ ಅಷ್ಟೆ ವಯಸಾದವರಂತೆ ಕಾಣುತ್ತಿಲ್ಲ. ವಿಚಾರಧಾರೆಯ ಮಾತು ನಮಗೆಲ್ಲ ಚಿಂತನೆಯನ್ನು ಪ್ರಚೋದಿಸುತ್ತದೆ/
    ** ಪಾರ್ಥಸಾರಥಿ

    ಪ್ರತ್ಯುತ್ತರಅಳಿಸಿ
  2. ಪಾರ್ಥಸಾರಥಿಯವರೇ, ಪಂ.ಸುಧಾಕರ ಚತುರ್ವೇದಿಯವರಿಗೆ ನಿನ್ನೆ 116ನೆಯ ವರ್ಷದ ಜನ್ಮದಿನ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ಚತುರ್ವೇದಿಯವರ ಶಿಷ್ಯರು. ಚತುರ್ವೇದಿ ಮತ್ತು ಶರ್ಮರವರು ಬೇರೆ ಬೇರೆ ವ್ಯಕ್ತಿಗಳು. ಹೆಸರಿನ ಕಾರಣದಿಂದ ನಿಮ್ಮಂತೆ ಹಲವರು ಭಾವಿಸುವರು. ಚತುರ್ವೇದಿಯವರ ಕುರಿತು ವಿಶೇಷ ಲೇಖನ ಓದಿ, ಪ್ರತಿಕ್ರಿಯಿಸಿರಿ. ಸಂಪದದಲ್ಲೂ ಪ್ರಕಟಿಸಿರುವೆ.

    ಪ್ರತ್ಯುತ್ತರಅಳಿಸಿ
  3. ಆತ್ಮೀಯರೇ,
    " ಜಗವ ತಿದ್ದಲು ನೀನಾರಯ್ಯ, ನಿನ್ನ ನೀ ತಿದ್ದಿಕೋ ಮೊದಲು " ಎಂಬ ಬಸವಣ್ಣನವರ ವಚನ ಓದಿದ್ದೆ. ವೇದದಲ್ಲೂ ಈ ಮಾತುಗಳಿವೆ ಎಂಬುದು ಕೇಳಿ ಸಂತೋಷವಾಗಿದೆ. ಧನ್ಯವಾದಗಳು.
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  4. 'ವೇದಸಾಗರ'ದಲ್ಲಿ ಇಲ್ಲದ್ದು ಯಾವುದು ಎಂದು ಆಶ್ಚರ್ಯವಾಗುತ್ತದೆ. ನಮ್ಮ ಶಕ್ತಿ, ಭಕ್ತಿಗೆ ತಕ್ಕಷ್ಟು ನಮಗೆ ದಕ್ಕೀತು!! ಧನ್ಯವಾದ, ಪ್ರಕಾಶರೇ.

    ಪ್ರತ್ಯುತ್ತರಅಳಿಸಿ