ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 1, 2017

ಸಂಭ್ರಮದ ಕಾರ್ತಿಕ ದೀಪೋತ್ಸವ, ಭಾರತ ಮಾತಾ ಪೂಜನ     ಹಾಸನ ನಗರದ ತಣ್ಣೀರು ಹಳ್ಳ ಬಡಾವಣೆಯಲ್ಲಿ ಅಲ್ಲಿನ ಶಿವಾಜಿ ಶಾಖೆಯ ಸ್ವಯಂಸೇವಕರು ನಿನ್ನೆ  ಕಡೆಯ ಕಾರ್ತಿಕ ಸೋಮವಾರದ ನಿಮಿತ್ತ ದೀಪೋತ್ಸವ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮ ಏರ್ಪಡಿಸಿ ನನ್ನನ್ನು ಮಾತನಾಡಲು ಆಹ್ವಾನಿಸಿದ್ದರು. ಅಲ್ಲಿ ಸೇರಿದ್ದ ಬಡಾವಣೆಯ ಮಕ್ಕಳು, ಮಾತೆಯರ ಸಂಭ್ರಮ ಕಂಡು ಸಂತೋಷವಾಯಿತು. ಅಖಂಡ ಭಾರತದ ನಕ್ಷೆಯನ್ನು, ಓಂಕಾರವನ್ನು ರಂಗೋಲಿಯಲ್ಲಿ ಬಿಡಿಸಿ ಸುತ್ತಲೂ ಹಣತೆ ಹಚ್ಚುವಾಗಿನ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಾಗಿನ ಅವರ ಉತ್ಸಾಹ ಮನ ಮುಟ್ಟಿತು. ದೀಪ ಹಚ್ಚುವ ಕಾರ್ಯದ ಹಿರಿಮೆ, ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಅಡ್ಡಿಯಾಗಿರುವ ನಮ್ಮವರನ್ನೇ ಗುರುತಿಸಿ ಅಡ್ಡಿ ನಿವಾರಿಸುವ ಅಗತ್ಯ, ತಪ್ಪು ಇತಿಹಾಸವನ್ನು ಮಕ್ಕಳಿಗೆ ಬೋಧಿಸುತ್ತಿರುವುದರಿಂದ ಆಗುತ್ತಿರುವ ಅನಾಹುತಗಳನ್ನು ವಿವರಿಸಿ, ಸ್ವಾಭಿಮಾನದಿಂದ ನಮ್ಮತನವನ್ನು ಉಳಿಸಿ, ಬೆಳೆಸಬೇಕಾದ ಕಾರ್ಯಕ್ಕೆ ಗಮನ ಕೊಡಬೇಕೆಂದು ತಿಳಿಸಲಾಯಿತು. ಮಹಾಭಾರತದ ಶಕುನಿ, ಜಯಚಂದ್ರ, ಮೀರ್ ಸಾದಿಕ್, ಮಣಿಶಂಕರ ಅಯ್ಯರ್ ಮುಂತಾದವರ ನಡೆಗಳನ್ನು ಉದಾಹರಿಸಿ, ಒಳ್ಳೆಯ ಕಾರ್ಯಕ್ಕೆ ಅಡಿಪಾಯ ಹಾಕುತ್ತಿರುವ ಇಂದಿನ ಪ್ರಧಾನಿಯವರ ಒಳ್ಳೆಯ ಕೆಲಸಗಳಿಗೆ ಎಲ್ಲರೂ ಸಹಕರಿಸುವುದು ಭಾರತವನ್ನು ಮತ್ತೊಮ್ಮೆ ಪ್ರಪಂಚದ ಅಗ್ರಗಣ್ಯರಾಷ್ಟ್ರವಾಗಿಸಲು ಸಹಕಾರಿಯೆಂದು ಗಮನಕ್ಕೆ ತರಲಾಯಿತು. ಸಿಹಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. 
-ಕ.ವೆಂ.ನಾಗರಾಜ್.


-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ