ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಮೇ 9, 2010

ಏನಂತೆ? ? . . . .! !

                ಏನಂತೆ?  ? .  . .! !


ಏನಂತೆ? ಸೋತರೇನಂತೆ?
              ಸೋಲೆಂಬುದೇನೆಂದು ತಿಳಿಯಿತಂತೆ!
              ಗೆಲುವಿನ ದಾರಿಯದು ಕಂಡಿತಂತೆ!!


ಏನಂತೆ? ಬಿದ್ದರೇನಂತೆ?
              ನೋವೆಂಬುದೇನೆಂದು ತಿಳಿಯಿತಂತೆ!
              ನೋಡಿ ನಡೆಯಲು ಕಲಿತೆನಂತೆ!!


ಏನಂತೆ? ಹಸಿವಾದರೇನಂತೆ?
              ದುಡಿದು ಉಣ್ಣಲು ಮಾರ್ಗವಂತೆ!
              ಹಳಸಿದ ಅನ್ನವೂ ರುಚಿಯಂತೆ!!


ಏನಂತೆ? ದುಃಖವಾದರೇನಂತೆ?
              ಸಂತೋಷದ ದಾರಿ ಸಿಕ್ಕಿತಂತೆ!
              ಸುಖವೆಂಬುದೊಳಗೇ ಇದೆಯಂತೆ!!


ಏನಂತೆ? ತಪ್ಪಾದರೇನಂತೆ?
              ನಡೆ ತಿದ್ದಿ ಸಾಗುವ ಮನಸಂತೆ!
              ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
              ನಿಂದಕರ ಬಾಯಿ ಹೊಲಸಂತೆ!
              ನಾನಾರೆಂದು ನನಗೆ ತಿಳಿಯಿತಂತೆ!!


ಏನಂತೆ? ಸೂರಿಲ್ಲದಿರೇನಂತೆ?
              ಲೋಕವೆ ನನ್ನ ಮನೆಯಂತೆ!
              ಬಹು ದೊಡ್ಡ ಮನೆಯೇ ನನ್ನದಂತೆ!!


ಏನಂತೆ? ದಿಕ್ಕಿಲ್ಲದಿರೇನಂತೆ?
             ಜನರೆಲ್ಲ ನನ್ನ ಬಂಧುಗಳಂತೆ!
             ಬಲು ದೊಡ್ಡ ಸಂಸಾರ ನನ್ನದಂತೆ!!


                     ?   ?    !    !
-ಕ.ವೆಂ.ನಾಗರಾಜ್.

4 ಕಾಮೆಂಟ್‌ಗಳು:

  1. ಏನಂತೆ? ನಾ ಕವಿ ಅಲ್ಲದಿದ್ದರೇನಂತೆ?

    ಬರೆವ ಕವಿಗಳಿಗಿಲ್ಲ ಅಭಾವ |
    ಅವುಗಳನ್ನೋದಿ ಸವಿವುದು ನನ್ನ ಜೀವ ||

    ಕವನ ಚೆನ್ನಾಗಿದೆ. ಅಭಿನಂದನೆಗಳು

    ಕವಿ ಸುರೇಶ್, ಶಿವಮೊಗ್ಗ

    ಪ್ರತ್ಯುತ್ತರಅಳಿಸಿ
  2. ಸಂಪದಿಗರ ಪ್ರತಿಕ್ರಿಯೆಗಳು:
    http://sampada.net/image/25604

    ಪ್ರತ್ಯುತ್ತರಅಳಿಸಿ
  3. ಕೌಶಿಕ
    26MAY2010 1:27
    ಆತ್ಮ ವಿಶ್ವಾಸ ತುಂಬುವ ಸಾಲುಗಳು...
    //ಏನಂತೆ? ಬಿದ್ದರೇನಂತೆ? ತುಂಬಾ ಇಸ್ಟ ಆಇತು..

    ಶ್ರೀಕಾoತ ಕಲಕೋಟಿ
    26MAY2010 1:33
    ನಾಗರಾಜರೆ ಉತ್ತಮವಾಗಿದೆ..

    Ksraghavendranavada
    26MAY2010 1:49
    ಕವಿನಾಗರಾಜರೇ, ಮತ್ತೊ೦ದು ಉತ್ತಮ ಕವನ ತಮ್ಮಿ೦ದ,
    ಅಭಿನ೦ದನೆಗಳು.
    ನಿಮ್ಮವ, ನಾವಡ.

    ಶ್ರೀಕಾoತ ಕಲಕೋಟಿ
    26MAY2010 3:54
    ಡಿ ವಿ ಜಿ ಯವರ 'ಕಲ್ಲಾಗು ಕಷ್ಟದಡಿ.. ನೆನಪಾತು

    ಹೊಳೆ ನರಸೀಪುರ ಮಂಜುನಾಥ
    26MAY2010 1:56
    ಅರ್ಥಪೂರ್ಣ ಕವನ ನಾಗರಾಜರೆ, ನಾನೂ ಸಹ "ಯಾರೇನಂದರೇನಂತೆ" ಅಂದುಕೊಂಡೇ ದುಬೈಗೆ ಹೋಗಿದ್ದು! ಸೋಲಿನ ಸನಿಹದಲ್ಲೇ ಗೆಲುವ ಕಂಡಿದ್ದು, ಮನ ಬಿಚ್ಚಿ ನಕ್ಕಿದ್ದು.

    ಆಸು ಹೆಗ್ಡೆ
    26MAY2010 2:25
    ಏನಂತೆ? ಯಾರು ಏನೆಂದರೇನಂತೆ?
    ನಾನಂತೂ ಈ ಕವನ ಇಷ್ಟವಾಯ್ತೆಂದನುವೆನಂತೆ

    ಕವಿಗಳಿನೆ ಧನ್ಯವಾದಗಳನು ಅರ್ಪಿಸುತ್ತಿರುವೆನಂತೆ

    Kavinagaraj
    26MAY2010 3:00
    ಬರಹ ಮೆಚ್ಚಿದ ಮತ್ತು ಪ್ರೋತ್ಸಾಹಿಸುತ್ತಿರುವ ಆತ್ಮೀಯರಾದ ನಾವಡ, ಕೌಶಿಕ್, ಶ್ರೀಕಾಂತ್, ಮಂಜು ಮತ್ತು ಸುರೇಶ ಹೆಗ್ಡೆಯವರೇ, ವಂದಿಸುವೆ ನಿಮ್ಮೆಲ್ಲರಿಗೆ. -:)

    ಪದ್ಮ.ಎ
    18FEB2012 10:11
    ಏನಂತೆ ? ಕವನ ಬರೆದು ವರ್ಷಗಳೇ ಕಳೆದಿದ್ದರೇನಂತೆ?
    ಮತ್ತೆ ಮತ್ತೆ ಓದಿಸುವುದಂತೆ
    ಕವಿನಾಗರಾಜ್ ರವರೆ ಕವನ ಚೆನ್ನಾಗಿದೆ
    -ಎ.ಪದ್ಮ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Sridhar Bandri
      ನಮ್ಮ ತಾಯಿಯವರ ಅಜ್ಜಿ ಅಂದರೆ ನಮ್ಮ ಮುತ್ತಜ್ಜಿ ಹುಡುಗರು ಜಗಳ ಮಾಡಿಕೊಂಡು ಅವರ ಬಳಿಗೆ ದೂರನ್ನೊಯ್ದರೆ ಅದನ್ನು ಬಹಳ ಸರಳವಾಗಿ ಪರಿಹರಿಸುತ್ತಿದ್ದರು. ಉದಾಹರಣೆಗೆ, "ಅಜ್ಜಿ ಆ ಹುಡುಗ ನನಗೆ ಬೈಯ್ದ" ಎಂದು ದೂರನ್ನೊಯ್ದರೆ, ಆಕೆ ನಮಗೆ ಹೀಗೆ ಕೇಳುತ್ತಿದ್ದಳು, "ಅವರು ಗಟ್ಟಿಯಾಗಿ ಬೈಯ್ದರಾ?" ಹೌದೆಂದರೆ, ಆಕೆ "ಗಟ್ಟಿಯಾಗಿ ಬೈಯ್ದರೆ ಗಾಳಿಗೆ ಹೋಗುತ್ತೆ ಬಿಡೋ" ಎಂದು ಸಮಾಧಾನಗೊಳಿಸುತ್ತಿದ್ದರು. ಇಲ್ಲಾ ಅವನು ಮೆತ್ತಗೆ ಬೈಯ್ದ ಎಂದು ಹೇಳಿದರೆ, ಹಾಗಾದರೆ ಅದು ಅವರಿಗೇ ಅಂಟಿಕೊಳ್ಳುತ್ತದೆ ಬಿಡೋ ಎಂದು ತೇಲಿಸಿಬಿಡುತ್ತಿದ್ದರು. ಹೀಗೆ ಮಕ್ಕಳಿಗೆ ಎಲ್ಲಾ ವಿಷಯಗಳನ್ನು ಕ್ರೀಡಾಮನೋಭಾವದಿಂದ ನೋಡುವಂತೆ ಪ್ರೇರೇಪಿಸುತ್ತಿದ್ದರು. ಅದಕ್ಕೆ ಭಾಷ್ಯ ಬರೆದಂತಿದೆ ನಿಮ್ಮ ಕವನ. ಒಳ್ಳೆಯ ಕವನ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಕವಿಗಳೆ.

      ಅಳಿಸಿ