ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ|
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ||
ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನಬೇಡ ನಿನ್ನದೆನೆಬೇಡ
ಜಗವೃಕ್ಷರಸ ಹರಿವ ಕೊಂಬೆ ನೀನು ಮೂಢ||
ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು|
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ||
ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು|
ಒಳಿತು ಮಾಡದ ಕೆಡಕು ಎಣಿಸಲರಿಯರಿಹರ|
ಇವರೊಳು ನೀಯಾರು ನಾಯಾರು ಹೇಳು ಮೂಢ||
-ಕ.ವೆಂ.ನಾಗರಾಜ್.
ವೆ೦ಕಟೇಶಮೂರ್ತಿ. ವಿ.ಎಸ್.
ಪ್ರತ್ಯುತ್ತರಅಳಿಸಿ21MAY2010 5:52
ನಾಗರಾಜ್ ರವರೇ
ಮೂಢ ಉವಾಚ-೮ ಚೆನ್ನಾಗಿದೆ..
ನನ್ನಿ
ಬೆಳ್ಳಾಲ ಗೋಪೀನಾಥ ರಾವ್
21MAY2010 7:05
ಕವಿಗಳೇ
ಮೂಢನ ಉವಾಚ ಸಕತ್ತಾಗಿದೆ
ಧನ್ಯವಾದಗಳು
ಶ್ರೀನಾಥ್ ಭಲ್ಲೆ
21MAY2010 7:38
ಕವಿ ನಾಗರಾಜರೇ
ಅದ್ಭುತವಾಗಿದೆ
ಅದರಲ್ಲೂ ಎರಡನೆಯದು !
ಕಷ್ಟ ಸುಖಗಳು ದೇವನ ಪ್ರಸಾದವೆಂದು ಎಣಿಸಿ
ಪ್ರತ್ಯುತ್ತರಅಳಿಸಿಅಪಕಾರ ಮಾಡದೆ ಉಪಕಾರ ಸ್ಮರಿಸುತ
ಒಳ್ಳಿತಾವುದೆಂದು ಮನ ನುಡಿದಂತೆ ಮಾಡಿ
ದೇವನ ಕೃತಜ್ಞತೆಯಿಂ ನೆನೆವ ಮಂದಿ ನಾ//
ಬಹಳ ದಿನಗಳ ಹಿಂದೆ ಬರೆದ ಕವನದ ಸಾಲುಗಳು ನಿಮ್ಮ ಉವಾಚ ಓದುವಾಗ ಜ್ಞಾಪಕಕ್ಕೆ ಬಂತು. ಸಾದರ ಪಡಿಸಿರುವೆ.
ಧನ್ಯವಾದಗಳು
ಪ್ರಕಾಶ್
ಸಹಜ ಸುಂದರ ಭಾವವಿರುವ ಸಾಲುಗಳು, ಪ್ರಕಾಶರೇ.
ಅಳಿಸಿ