ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 11, 2010

ಮೂಢ ಉವಾಚ -6

                        ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ|
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ||

                  ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನಬೇಡ ನಿನ್ನದೆನೆಬೇಡ
ಜಗವೃಕ್ಷರಸ ಹರಿವ ಕೊಂಬೆ ನೀನು ಮೂಢ||

                  ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು|
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ||

                   ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು|
ಒಳಿತು ಮಾಡದ ಕೆಡಕು ಎಣಿಸಲರಿಯರಿಹರ|
ಇವರೊಳು ನೀಯಾರು ನಾಯಾರು ಹೇಳು ಮೂಢ||
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. ವೆ೦ಕಟೇಶಮೂರ್ತಿ. ವಿ.ಎಸ್.
    21MAY2010 5:52
    ನಾಗರಾಜ್ ರವರೇ
    ಮೂಢ ಉವಾಚ-೮ ಚೆನ್ನಾಗಿದೆ..
    ನನ್ನಿ

    ಬೆಳ್ಳಾಲ ಗೋಪೀನಾಥ ರಾವ್
    21MAY2010 7:05
    ಕವಿಗಳೇ
    ಮೂಢನ ಉವಾಚ ಸಕತ್ತಾಗಿದೆ
    ಧನ್ಯವಾದಗಳು

    ಶ್ರೀನಾಥ್ ಭಲ್ಲೆ
    21MAY2010 7:38
    ಕವಿ ನಾಗರಾಜರೇ
    ಅದ್ಭುತವಾಗಿದೆ
    ಅದರಲ್ಲೂ ಎರಡನೆಯದು !

    ಪ್ರತ್ಯುತ್ತರಅಳಿಸಿ
  2. ಕಷ್ಟ ಸುಖಗಳು ದೇವನ ಪ್ರಸಾದವೆಂದು ಎಣಿಸಿ
    ಅಪಕಾರ ಮಾಡದೆ ಉಪಕಾರ ಸ್ಮರಿಸುತ
    ಒಳ್ಳಿತಾವುದೆಂದು ಮನ ನುಡಿದಂತೆ ಮಾಡಿ
    ದೇವನ ಕೃತಜ್ಞತೆಯಿಂ ನೆನೆವ ಮಂದಿ ನಾ//
    ಬಹಳ ದಿನಗಳ ಹಿಂದೆ ಬರೆದ ಕವನದ ಸಾಲುಗಳು ನಿಮ್ಮ ಉವಾಚ ಓದುವಾಗ ಜ್ಞಾಪಕಕ್ಕೆ ಬಂತು. ಸಾದರ ಪಡಿಸಿರುವೆ.
    ಧನ್ಯವಾದಗಳು
    ಪ್ರಕಾಶ್

    ಪ್ರತ್ಯುತ್ತರಅಳಿಸಿ