ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ನವೆಂಬರ್ 5, 2011

ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ

"ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು
ಮುಂದಡಿಯನಿಟ್ಟೇವು ಸಾಧನೆಯ ಮಾಡೇವು"
     ತೀರ್ಥಹಳ್ಳಿಯಲ್ಲಿ ದಿನಾಂಕ ೨೭-೧೨-೨೦೦೯ರಂದು ನಡೆದ ಸಮಾವೇಶ ಸಹ ಕವಿಮನೆತನದವರ ಹಾಗೂ ಬಂಧು-ಬಳಗದವರಲ್ಲಿ ಪೂರ್ವಜರ ಸಾಧನೆಗಳನ್ನು ಗುರುತಿಸುವ, ಸ್ಮರಿಸುವ ಮತ್ತು ಆ ಮೂಲಕ ಸಜ್ಜನಶಕ್ತಿಯನ್ನು ಒಗ್ಗೂಡಿಸುವ ಮನೋಭಾವ ಜಾಗೃತಿಗೊಳಿಸುವಲ್ಲಿ ಸಫಲವಾಯಿತು. ೧೪-೦೫-೦೯ರಂದು ನಿಧನರಾದ ಶಿಕಾರಿಪುರದ ಶ್ರೀಮತಿ ವಿನೋದಾಯಿಗೋಪಾಲರಾವ್ ಮತ್ತು ೧೪-೦೭-೦೯ರಂದು ನಿಧನರಾದ ಕವಿಮನೆತನದ ಅತಿ ಹಿರಿಯ ಸದಸ್ಯರಾಗಿದ್ದ ಶ್ರೀ ಕವಿವೆಂಕಟಸುಬ್ಬರಾಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕವಿಕಿರಣದ ಡಿಸೆಂಬರ್,೨೦೦೯ರ ಸಂಚಿಕೆ ಬಿಡುಗಡೆಯಾಯಿತು.
     ಸಮಾವೇಶದ ಆಯೋಜಕರಾಗಿದ್ದ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ್ದ ಅನುಭವ ಹಂಚಿಕೊಂಡದ್ದು ಅವಿಸ್ಮರಣಿಯವಾಗಿತ್ತು. ಅವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಪಡೆದ ಸನ್ಮಾನ, ಪ್ರಶಸ್ತಿಗಳನ್ನು ಪ್ರದರ್ಶಿಸಲಾಗಿದ್ದು ಎಲ್ಲರಿಗೆ ಪ್ರೇರಣಾದಾಯಿಯಾಗಿತ್ತು. (ಸಾಧಕ ಶ್ರೀ ಶೇಷಾದ್ರಿ ದೀಕ್ಷಿತರ ಕುರಿತು ಹಿಂದೆ ಪ್ರಕಟಿಸಿದ್ದ ಲೇಖನವನ್ನು ಆಸಕ್ತರು ಗಮನಿಸಬಹುದು: http://kavimana.blogspot.com/2011/07/blog-post_29.html )
     ಶ್ರೀಮತಿಯರಾದ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್ ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶಜೋಯಿಸ್ ಇವರುಗಳು ಪ್ರಧಾನ ಸೂತ್ರಧಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಸೃಜನಾತ್ಮಕವಾಗಿದ್ದು ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದವು. ಸ್ವರಚನೆ ಮಾಡಿ ಹಾಡಲಾದ ಹಾಡುಗಳಿಗೆ ಚಿಕ್ಕವರು, ದೊಡ್ಡವರು ಎಂಬ ಭೇದವಿಲ್ಲದೆ ನೃತ್ಯ ಬಾರದಿದ್ದ ಸಭಿಕರೂ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವ ಸಂಕೇತವಾಗಿತ್ತು, ಸಮಾವೇಶವನ್ನು ಅರ್ಥಪೂರ್ಣಗೊಳಿಸಿತ್ತು. ಸಮಾವೇಶದ ಆಯೋಜಕರಾದ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತ್ ಸಹೋದರರು, ಕವಿಕಿರಣ ಸಂಚಿಕೆಯ ಪ್ರಾಯೋಜಕರನ್ನು ಅಭಿನಂದಿಸಲಾಯಿತು. ಶಿಕಾರಿಪುರದಲ್ಲಿ ಮುಂದಿನ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಸಮಾವೇಶದ ಕೆಲವು ಫೋಟೋಗಳು ನಿಮ್ಮ ಮಾಹಿತಿಗಾಗಿ.











(ಹಿಂದಿನ ಲೇಖನ: ಬೆಂಗಳೂರು ಸಮಾವೇಶದಲ್ಲಿಟ್ಟ ಗಟ್ಟಿ ಹೆಜ್ಜೆಗಳು:   http://kavimana.blogspot.com/2011/10/blog-post_30.html)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ