ಶ್ರದ್ಧೆಯಿರಬೇಕು ಧರ್ಮದಾಚರಣೆಯಲಿ
ಹಂಬಲವಿರಬೇಕು ಅರಿವ ಹಸಿವಿನಲಿ|
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿಯದು ಸಿಗದಿರದೆ ಮೂಢ||
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು|
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ||
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ|
ಗುರುವಿನಲಿ ಶ್ರದ್ಧೆ ಉತ್ತಮರ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ||
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ|
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ||
*****************
-ಕವಿನಾಗರಾಜ್.
ಹಂಬಲವಿರಬೇಕು ಅರಿವ ಹಸಿವಿನಲಿ|
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿಯದು ಸಿಗದಿರದೆ ಮೂಢ||
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು|
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ||
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ|
ಗುರುವಿನಲಿ ಶ್ರದ್ಧೆ ಉತ್ತಮರ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ||
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ|
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ||
*****************
-ಕವಿನಾಗರಾಜ್.
ಸರಿಯಾದ ಮಾತು ಸಾರ್, 'ನಾನತ್ವ ದೂರ ನಡೆನುಡಿಯು ನೇರ' ಇದ್ದರೆ ಜಗವು ನಿಚ್ಚಳ ನಿರ್ಮಲ ಸವ್ಯ.
ಪ್ರತ್ಯುತ್ತರಅಳಿಸಿವಮದನೆ, ಬದರೀನಾಥರೇ.
ಅಳಿಸಿ