ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ
ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ |
ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ
ಸರ್ವೋತ್ತಮರಲಿರುವವನವನೆ ಮೂಢ ||
ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ
ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ |
ಅಚ್ಚರಿಯ ಆಕಾಶಗಳೆಲ್ಲದರ ಕಾರಕನು
ಪ್ರೇರಕನು ಅವನಲ್ಲವೇನು ಮೂಢ ||
ತಾಯಿಯು ಅವನೆ ತಂದೆಯು ಅವನೆ
ಬಂಧುವು ಅವನೆ ಬಳಗವು ಅವನೆ |
ವಿದ್ಯೆಯು ಅವನೆ ಸಕಲಸಿರಿಯವನೆ
ಸಕಲ ಸರ್ವನವನಲ್ಲದಿನ್ಯಾರು ಮೂಢ ||
ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ
ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು |
ನಿರ್ಲಿಂಗಿಯೂ ಹೌದು ಏನಲ್ಲ ಏನಹುದು
ಎಲ್ಲವೂ ಅವನೆ ಅವನು ಅವನೆ ಮೂಢ ||
***********
-ಕ.ವೆಂ.ನಾಗರಾಜ್.
ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ |
ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ
ಸರ್ವೋತ್ತಮರಲಿರುವವನವನೆ ಮೂಢ ||
ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ
ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ |
ಅಚ್ಚರಿಯ ಆಕಾಶಗಳೆಲ್ಲದರ ಕಾರಕನು
ಪ್ರೇರಕನು ಅವನಲ್ಲವೇನು ಮೂಢ ||
ತಾಯಿಯು ಅವನೆ ತಂದೆಯು ಅವನೆ
ಬಂಧುವು ಅವನೆ ಬಳಗವು ಅವನೆ |
ವಿದ್ಯೆಯು ಅವನೆ ಸಕಲಸಿರಿಯವನೆ
ಸಕಲ ಸರ್ವನವನಲ್ಲದಿನ್ಯಾರು ಮೂಢ ||
ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ
ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು |
ನಿರ್ಲಿಂಗಿಯೂ ಹೌದು ಏನಲ್ಲ ಏನಹುದು
ಎಲ್ಲವೂ ಅವನೆ ಅವನು ಅವನೆ ಮೂಢ ||
***********
-ಕ.ವೆಂ.ನಾಗರಾಜ್.
"ಏನಲ್ಲ ಏನಹುದು" ಎನ್ನುತ್ತಾ ಭಗವಂತನ ಸಾಕ್ಷಾತ್ಕಾರ ಮಾಡಿಸಿದಿರಿ ನಮಗೆ.
ಪ್ರತ್ಯುತ್ತರಅಳಿಸಿಮಾಡಿಸಿದವನು 'ಅವನೇ'! ಧನ್ಯವಾದ, ಬದರೀನಾಥರೇ.
ಅಳಿಸಿEvery thing is God/almighty.we are just puppets in his hand
ಪ್ರತ್ಯುತ್ತರಅಳಿಸಿವಂದನೆ, ಸುಧೀಂದ್ರರೇ.
ಅಳಿಸಿ