ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜೂನ್ 20, 2011

ಮೂಢ ಉವಾಚ - 55: ದೇವ-2

ಹಣದಿಂದ ಸಿಗನು ಅಧಿಕಾರಕೆ ಬರನು
ವಿದ್ಯೆಗೆ ಬಾಗನು ಸುಂದರತೆಗೊಲಿಯನು |
ಚತುರತೆಗೆ ದಕ್ಕನು ಏನಿತ್ತರೊಲ್ಲನು
ನಿಜ ಪ್ರೀತಿಗೊಲಿಯುವನು ಮೂಢ ||


ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||


ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ ||


ಅರಿವಿಗಸದಳನು ಅಗೋಚರವಾಗಿಹನು
ಅಳತೆಗೆ ಸಿಲುಕನು ಬುದ್ಧಿಗೆ ನಿಲುಕನು |
ಅನಾದಿಯಾಗಿಹನು ಅನಂತನೆನಿಸಿಹನು
ಪರಿಶುದ್ದ ಪರಿಪೂರ್ಣ ಅವನೆ ಮೂಢ ||
**************
-ಕ.ವೆಂ.ನಾಗರಾಜ್.
ಬದರೀನಾಥ ಪಲವಳ್ಳಿಯವರು ಹಂಚಿಕೊಂಡಿರುವುದು:

4 ಕಾಮೆಂಟ್‌ಗಳು:

 1. [ಕಾಣದಿಹ ದೇವನಿಹನೆಂದು ಹೇಳಿಸುವ
  ಶಕ್ತಿ ಯಾವುದದಚ್ಚರಿಯು ಮೂಢ ]

  ಇರುವೆಯಲಿ ಅಂಗಾಂಗ ಮೂಡಿಸಿದವನಾರು?
  ಹುಲ್ಲಿನಲಿ ಹಾಲನ್ನು ಹಿಂಡಿದವನಾರು?
  ನೀರು ಗಾಳಿಯನಿತ್ತು ಸಲಹಿದವನಾರು?
  ಉಂಡ ಅನ್ನವ ರಕ್ತ ಮಾಡಿದವನಾರು?
  ಎಲ್ಲ ಮಾಡುವೆನೆಂದು ಬೀಗುವ
  ಜನರ ಬಳಿ ಇದೆಯೇ....ಉತ್ತರ?
  .................
  ಅದಕೆ ಉತ್ತರ ... ಪರಮೇಶ್ವರ

  ಪ್ರತ್ಯುತ್ತರಅಳಿಸಿ
 2. ಮೂಢ ಉವಾಚ - 55: ದೇವ-2 ರಲ್ಲಿ ಕವಿಯವರು ದೇವರ ನಿಜವಾದ ಅರ್ಥ ಮತ್ತು ಅವನ ಕಲ್ಪನೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

  ಪ್ರತ್ಯುತ್ತರಅಳಿಸಿ
 3. Nalina T R Swamy
  Wow! Superb, ಅರಿತವರು ಯಾರಿಹರು ಗಗನದ ನಿಜಬಣ್ಣ

  ಪ್ರತ್ಯುತ್ತರಅಳಿಸಿ