ಶೆಟ್ಟಿಹಳ್ಳಿಯ ಕೆಂಗ ನನ್ನ ಮನೆಯ ಮೇಲೆ ಒಂದು ಕೊಠಡಿ ಕಟ್ಟಿಸುತ್ತಿದ್ದ ಸಂದರ್ಭದಲ್ಲಿ ಬರುತ್ತಿದ್ದ ಒಬ್ಬ ಗಾರೆಯಾಳು. ಆತನಿಗೆ ಲೆಕ್ಕ ಬರುತ್ತಿರಲಿಲ್ಲ. ಅಕ್ಷರವಂತನೂ ಅಲ್ಲ. ಆದರೆ ತನಗೆ ಬರಬೇಕಾದ ಕೂಲಿಯನ್ನು ಸರಿಯಾಗಿ ಪಡೆಯುತ್ತಿದ್ದ. ಪಡೆದಿದ್ದ ಹಣವನ್ನು ಕೊಟ್ಟವರಿಗೆ ಗೊತ್ತಾಗದಂತೆ ಬೇರೊಬ್ಬರಿಂದ ಎಣಿಸಿಸಿಕೊಂಡು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದ. ಬಂದ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿಬಿಡುತ್ತಿದ್ದ. ಅವನು ಹಣವನ್ನು ಮೂಟೆಗಳ ಲೆಕ್ಕದಲ್ಲಿ ಹೇಳುತ್ತಿದ್ದ. ಅರ್ಥಾತ್ ಅವರ ಹತ್ತಿರ ಅಷ್ಟು ಮೂಟೆ ಹಣ ಇದೆ, ಇವರ ಹತ್ತಿರ ಇಷ್ಟು ಮೂಟೆ ಹಣ ಇದೆ ಅನ್ನುತ್ತಿದ್ದ. ತನ್ನ ಹತ್ತಿರ ಮೂರು ಮೂಟೆ ಹಣ ಇದೆ ಅನ್ನುತ್ತಿದ್ದ ಅವನನ್ನು ಎಲ್ಲರೂ 'ಮೂರು ಮೂಟೆ ಕೆಂಗ' ಅನ್ನುತ್ತಿದ್ದರು. ಅವನು ನಾಲಗೆ ಹೊರಳದೆ ಸ್ಪಷ್ಟವಾಗಿ ಮಾತನಾಡುತ್ತಿರಲಿಲ್ಲ. ಅವನ ಸಹ ಕೆಲಸಗಾರರು ಅವನನ್ನು ರೇಗಿಸಿ ಅವನು ಕೊಡುತ್ತಿದ್ದ ಉತ್ತರಗಳನ್ನು ಕೇಳಿ ಮನರಂಜನೆ ಪಡೆಯುತ್ತಿದ್ದರು. ನಾನೊಮ್ಮೆ ಕೆಲಸದ ನಡುವೆ ಅವನನ್ನು ಹುರಿದುಂಬಿಸಿದಾಗ ಅವನು ಮಾಡಿದ ನೃತ್ಯ ಹೇಗಿತ್ತು ಗೊತ್ತೇ? ನೀವೇ ನೋಡಿ.
*******************
-ಕ.ವೆಂ.ನಾಗರಾಜ್.
*******************
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ