ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ|
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಕಾಣು ಮೂಢ||
ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು
ಆಸೆ ಆಮಿಷಗಳು ದಾರಿ ತಪ್ಪಿಸಬಹುದು|
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ
ಅಡಿಯ ಮುಂದಿಡಲು ಗೆಲುವೆ ಮೂಢ||
ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?|
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ||
ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ
ಆತ್ಮವಿಶ್ವಾಸವದು ತುಂಬಿ ತುಳುಕಿರಲು|
ಅಪಾಯವೆದುರಿಸುವ ಗಟ್ಟಿತನವಿರಲು
ನಾಯಕನು ಉದಯಿಸುವ ಕಾಣು ಮೂಢ||
********************
-ಕವಿನಾಗರಾಜ್.
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ|
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಕಾಣು ಮೂಢ||
ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು
ಆಸೆ ಆಮಿಷಗಳು ದಾರಿ ತಪ್ಪಿಸಬಹುದು|
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ
ಅಡಿಯ ಮುಂದಿಡಲು ಗೆಲುವೆ ಮೂಢ||
ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?|
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ||
ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ
ಆತ್ಮವಿಶ್ವಾಸವದು ತುಂಬಿ ತುಳುಕಿರಲು|
ಅಪಾಯವೆದುರಿಸುವ ಗಟ್ಟಿತನವಿರಲು
ನಾಯಕನು ಉದಯಿಸುವ ಕಾಣು ಮೂಢ||
********************
-ಕವಿನಾಗರಾಜ್.
[ವೀರನಿಗೆ ಅವಕಾಶ ಹೇಡಿಗದು ನೆಪವು]
ಪ್ರತ್ಯುತ್ತರಅಳಿಸಿಚಿನ್ನದಂತಹ ಮಾತು. ಆದರೆ ಅಂತಹ ಪರಿಸ್ಥಿತಿ ಎದುರಾದಾಗ ತರಗೆಲೆಯಂತೆ ತೂರಿಹೋಗುವುದೇ ಹೆಚ್ಚು.ಇದಕ್ಕೆಲ್ಲಾ ಮನಸ್ಸೇ ಕಾರಣ. ಮನಸ್ಸನ್ನು ಗಟ್ಟಿಮಾಡಿಕೊಳ್ಳುವ ವಿಧಾನವನ್ನು ನಿಮ್ಮ ಮಾತಿನಲ್ಲಿ ಸರಳವಾಗಿಯೇ ಬರೆಯುವಿರಾ?
ಶ್ರೀಧರ್, ಪ್ರಶಂಸೆ ಮುದಕೊಡದಿರದೆ? ವೇದಸುಧೆಯ ಕೆಲಸ ಮನಸ್ಸು ಗಟ್ಟಿಗೊಳಿಸುವ ಕಾರ್ಯವಲ್ಲದೆ ಮತ್ತೇನು?
ಪ್ರತ್ಯುತ್ತರಅಳಿಸಿ