ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 30, 2010

ಮೂಢ ಉವಾಚ -31

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆಂಬುದು ಜ್ಞಾನ|
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ||


ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು|
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||


ಪ್ರೀತಿಯಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಂದಲೆ ರಕ್ಷೆ ಪ್ರೀತಿಯಿಂದಲೆ ಭಯವು|
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ||


ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು
ದುಃಖ ಭಯಗಳೆಲ್ಲಿ ಆಸೆಗಳ ತೊರೆದವಗೆ|
ಸಂತಸದ ಬೆನ್ನೇರಿ ದುಃಖ ಭಯ ಬರದಿರದೆ
ಬುದ್ಧವಾಣಿಯಿದು ಮರೆಯದಿರು ಮೂಢ||
***************
-ಕವಿನಾಗರಾಜ್.

2 ಕಾಮೆಂಟ್‌ಗಳು:

  1. ಎರಡುಮಾತಿನಲ್ಲಿ ಪ್ರತಿಕ್ರಿಯಿಸಿದರೆ ಈ ಪದಪುಂಜಗಳಿಗೆ ಅವಮಾನ ಮಾಡಿದಂತಾಗುತ್ತದೆ! ಬದಲಿಗೆ ಆಗಿಂದಾಗ್ಗೆ ನೋಡಲನುವಾಗುವಂತೆ ಹಿಡಿದಿಡುವೆ.

    ಪ್ರತ್ಯುತ್ತರಅಳಿಸಿ