ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ನವೆಂಬರ್ 14, 2010

ಮೂಢ ಉವಾಚ -24 : ನಾಯಕ

                ನಾಯಕ
ಕೆಲಸಕಾರ್ಯವ ನೋಡೆ ಒಂದು ಕೈಮೇಲು
ಧೃಢ ನಿಲುವು ಇರಲು ಕಾಲದ ಅರಿವು|
ಸರಳ ನಡೆಯೊಡನೆ ಜಾಣತನ ಮೇಳವಿಸೆ
ನಾಯಕನು ಉದಯಿಸುವ ಕಾಣು ಮೂಢ||


ನುಡಿದಂತೆ ನಡೆದು ಮಾದರಿಯು ತಾನಾಗಿ
ಪರರ ಮನವರಿತು ನಡೆದು ಕರುಣೆಯಿರಲಾಗಿ|
ಕೆಲಸ ಮಾಡಿಸುವ ಕಲೆಯು ಕರಗತವು ತಾನಾಗೆ
ನಾಯಕನು ಉದಯಿಸುವ ಕಾಣು ಮೂಢ||


ಅಚಲ ವಿಶ್ವಾಸ ಹಿಡಿದ ಕಾರ್ಯದಲಿರಲು
ಧೃಢವಾದ ಮಾತು ನಿರ್ಭೀತ ನಡೆನುಡಿಯು|
ಸ್ನೇಹಕ್ಕೆ ಬದ್ಧ ಸಮರಕೂ ಸಿದ್ಧನಿಹ
ಗುಣವಿರುವ ನಾಯಕನೆ ಗೆಲುವ ಮೂಢ||


ಮೊಂಡುವಾದಗಳಿಲ್ಲ ಗರ್ವ ಮೊದಲಿಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ|
ಸೋಲು ಗೆಲುವುಗಳ ಸಮನಾಗಿ ಕಾಣಬಲ್ಲ
ಧೀರನವನೆ ನಿಜನಾಯಕನು ಮೂಢ||
*****************
-ಕವಿನಾಗರಾಜ್.

2 ಕಾಮೆಂಟ್‌ಗಳು:

  1. ಸಮಾಜದಲ್ಲಿನ ನಿಮ್ಮ ಅನುಭವದಿಂದಲೇ ಈ ಮಾತುಗಳು ಗಟ್ಟಿಯಾಗಿವೆ.ಲೀಡರ್ ಆಗಬಯಸುವರಿಗೆ ಸೂತ್ರಗಳಾಗಿವೆ.ಮುಂದುವರೆಯಲಿ.

    ಪ್ರತ್ಯುತ್ತರಅಳಿಸಿ