ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 20, 2010

ಮೂಢ ಉವಾಚ -10

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ
ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ|
ನಿಂತ ನೀರು ಕೊಳೆತು ನಾರುವುದು ನೋಡ
ಕೂಡಿಟ್ಟವರ ಪಾಡು ಬೇರಲ್ಲ ಮೂಢ||


ಆಳಿದವರಳಿದುಳಿಸಿಹುದೇನು ಕೇಳು
ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?|
ಅವಗುಣವ ಶಪಿಸಿ ಜನರು ಗುಣವ ನೆನೆವರು
ಎರಡು ದಿನದಲಿ ಎಲ್ಲ ಮರೆಯುವರು ಮೂಢ||


ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ|
ಶುಭ ಹರಸಿ ತಿಲ ಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. Ksraghavendranavada
    05JUL2010 1:58
    ಸ೦ಕ್ರಾ೦ತಿ ಸೊಗಸಾಗಿದೆ ಕವಿನಾಗರಾಜರೇ. ಮೊದಲೆರಡು ಸಾಲುಗಳು ಅರ್ಥಗರ್ಭಿತವಾಗಿವೆ. ನಮಸ್ಕಾರಗಳು.

    Kavinagaraj
    05JUL2010 3:17
    ಎಂದಿನಂತೆ ಮೆಚ್ಚಿದ ನಾವಡರೇ, ನಮನಗಳು.

    ನಾರಾಯಣ ಭಾಗ್ವತ
    05JUL2010 2:16
    ತುಂಬಾ ಅರ್ಥಗರ್ಭಿತವಾಗಿದೆ.ತುಂಬಾ ಇಷ್ಟವಾಯಿತು ವಂದನೆಗಳು ಕವಿನಾಗರಾಜ್ ರವರೆ.

    Kavinagaraj
    05JUL2010 3:18
    ವಂದನೆಗಳು, ಭಾಗ್ವತರೇ.

    ಬೆಳ್ಳಾಲ ಗೋಪೀನಾಥ ರಾವ್
    05JUL2010 7:05
    ಕವಿಗಳೇ
    ಅರ್ಥ ಗರ್ಭಿತವಾಗಿ ಸರ್ವಾಂಗ ಸುಂದರವಾಗಿ ಮೂಡಿ ಬರುತ್ತಲಿದೆ
    ಧನ್ಯವಾದಗಳು

    Kavinagaraj
    05JUL2010 7:58
    ಸಂತಸ ಭರಿತ ನಮನ, ಗೋಪಿನಾಥರೇ.

    Pavithra Prashanth
    06JUL2010 10:21
    ಏನ್ ಸಾಲುಗಳನ್ನ ಹೆಣೆದಿದ್ದೀರ ಸರ್.....ತು೦ಬಾ ಚೆನ್ನಾಗಿದೆ.......

    Kavinagaraj
    06JUL2010 10:43
    ಪವಿತ್ರಾ, ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಗೋಪಾಲ್ ಮಾ ಕುಲಕರ್ಣಿ
    06JUL2010 10:49
    ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಅಂತಹ "ಸತ್ ಕ್ರಾಂತಿಯ ಕಾಲ" ಬಲು ಬೇಗ ಬರಲಿ, ಮನಸ್ಸುಗಳೂ ಶುದ್ಧವಾಗಲಿ ಎಂದು ಹಾಯಿಸಿ ನಮಗಾಗಿ.

    ಪ್ರತ್ಯುತ್ತರಅಳಿಸಿ