ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಜುಲೈ 25, 2010

ಮೂಢ ಉವಾಚ -14

ತನುಮನಗಳ ತೀರದ ದಾಹವದೆ ಕಾಮ|
ದಾಹವನು ತಣಿಸಲು ಮಾಡುವುದೆ ಕರ್ಮ||
ತಣಿಯದದು ಕಾಮ ನಿಲ್ಲದದು ಕರ್ಮ||
ದೇವನಾಟವನರಿತವರಾರಿಹರೋ ಮೂಢ||

ಹಿತಕಾಮ ಮಿತಕಾಮ ವಿಕಟಕಟಕಾಮ|
ಸತ್ಕಾಮ ದುಷ್ಕಾಮ ಸುರಾಸುರರ ಕಾಮ||
ಎಂತಪ್ಪ ಜನರಿಹರೋ ಅಂತಪ್ಪ ಕಾಮ||
ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ||

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|
ಕಾಮವೆಂಬುದು ಪಾಶ ಕಾಮದಿಂದಲೆ ನಾಶ||
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|
ಕಾಮದಿಂದಲೆ ಸಕಲ ಸಂಪದವು ಮೂಢ||

ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು||
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ|
ದಿವ್ಯಕಾಮ ರಮ್ಯ ಕಾಮ ನಿನದಲ್ತೆ ಮೂಢ||
*************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಸಂತೋಷ್ ಎನ್. ಆಚಾರ್ಯ
    27JUL2010 6:18
    ಕಾಮ ತಣಿಯಬಾರದು ಕೂಡ ಅಲ್ಲವೇ?
    ನಮ್ಮ ನಮ್ಮ ಬಯಕೆಗಳೇ ನಮ್ಮನ್ನು ರೂಪಿಸುತ್ತವೆ ಎಂದು ನನ್ನ ನಂಬಿಕೆ

    Kavinagaraj
    27JUL2010 7:12
    ನಿಜ ಸಂತೋಷ್, ಕಾಮ ತಣಿಯಬಾರದು, ತಣಿಯದೆ ಇರಲೂಬಾರದು. ಮುಂದಿನ ಉವಾಚದಲ್ಲಿ ಇದೇ ವಿಷಯ ಪ್ರಸ್ತಾಪಿಸುವೆ. ಧನ್ಯವಾದಗಳು.

    ನಾರಾಯಣ ಭಾಗ್ವತ
    27JUL2010 6:23
    ಕವಿನಾಗರಾಜ್ ರವರೆ ತುಂಬಾ ಇಷ್ಟವಾಯಿತು.
    <> ಚೆಂದದ ಸಾಲು.

    Kavinagaraj
    27JUL2010 7:15
    ವಂದನೆಗಳು.

    ಬೆಳ್ಳಾಲ ಗೋಪೀನಾಥ ರಾವ್
    27JUL2010 7:32
    ಕವಿಗಳೇ ಮೊದಲ ನಾಲ್ಕು ಸಾಲು ತುಂಬಾ ಚೆನ್ನಾಗಿದೆ

    Kavinagaraj
    27JUL2010 9:09
    ಗೋಪಿನಾಥರೇ, ವಂದಿಸುವೆ.

    Ksraghavendranavada
    27JUL2010 7:33
    ನಿಷ್ಕಾಮ ಕಾಮ ಎ೦ಬ ಗ೦ಭೀರ ಪದದ ಅರ್ಥ ಬಹಳ ವಿಸ್ತಾರವಾದ ವ್ಯಾಪ್ತಿಯನ್ನು ಹೊ೦ದಿರುವ೦ಥದ್ದು ಹಾಗೂ ಅರ್ಥಗರ್ಭಿತ ಕೂಡಾ. ಎ೦ದಿನ೦ತೆ ಮೂಢ ಉವಾಚ ಸೊಗಸಾಗಿದೆ. ಮು೦ದುವರೆಯಲಿ.ನಮಸ್ಕಾರಗಳೊ೦ದಿಗೆ,

    Kavinagaraj
    27JUL2010 9:07
    ಮುಂದುವರೆಸಲು ಪ್ರೇರಿಸಿರುವ ನಾವಡರೇ, ನಮನಗಳು.

    ಸುಧೀ೦ದ್ರ ಚಡಗ
    27JUL2010 8:13
    <> ಈ ಸಾಲುಗಳು ಬಹಳ ಚೆನ್ನಾಗಿದೆ..

    Kavinagaraj
    27JUL2010 9:08
    ಧನ್ಯವಾದ, ಸುಧೀಂದ್ರ ಚಡಗರೇ.

    ಹೊಳೆ ನರಸೀಪುರ ಮಂಜುನಾಥ
    27JUL2010 9:13
    ಕವಿ ನಾಗರಾಜರೆ, ಧನ್ಯೋಸ್ಮಿ, ಕಳೆದ ಸಲ ಕೇಳಿದ ಪ್ರಶ್ನೆಗೆ ಈ ಬಾರಿ ಸರಿಯಾಗೇ ಉತ್ತರ ಸಿಕ್ಕಿತು. ತು೦ಬಾ ಅರ್ಥಪೂರ್ಣ ಸಾಲುಗಳು, ಮು೦ದುವರೆಯಲಿ.

    Kavinagaraj
    27JUL2010 9:27
    ನಾನೂ ಧನ್ಯ, ಮಂಜು. ನಿಮ್ಮ ಪ್ರತಿಕ್ರಿಯೆಯಿಂದುದ್ಭವಿಸಿದ 'ಕಾಮ' ಚಿಂತನೆಯ ಫಲವೀ 'ಕಾಮ'ಫಲ!

    ಪ್ರತ್ಯುತ್ತರಅಳಿಸಿ
  2. ಸಂತೋಷ್ ಎನ್. ಆಚಾರ್ಯ
    30JUL2010 5:38
    ನಿಮ್ಮ ಈ ಉವಾಚ ನನ್ನ ಹಿಂದಿನ ಪ್ರತಿಕ್ರಿಯೆಗೆ ನಿಜವಾಗಿಯೂ ಪೂರಕವಾಗಿದೆ. ಸರಳ ಸಾಲುಗಳಲ್ಲಿ ತುಂಬಾ ದೊಡ್ಡ ವಿಷಯವನ್ನು ಹೇಳಿದ್ದೀರಿ. ಧನ್ಯವಾದಗಳು

    Ksraghavendranavada
    30JUL2010 8:27
    ಕಾಮದ ದಿವ್ಯದರ್ಶನ ಅರ್ಥಗರ್ಭಿತವಾಗಿದೆ.
    ನಮಸ್ಕಾರಗಳೊ೦ದಿಗೆ,

    ಪ್ರತ್ಯುತ್ತರಅಳಿಸಿ