ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 20, 2010

ಮೂಢ ಉವಾಚ -11

ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು|
ಎಲ್ಲರ ಸೇವೆ ಬಯಸುವರು ತಾವಾರಿಗೂ ಆಗರು||
ಕಂಡರೂ ಕಾಣದೊಲು ನಟಿಸುವ ಚತುರರಿವರು|
ಇವರೊಳು ನೀಯಾರು ನಾಯಾರು ಹೇಳು ಮೂಢ||

ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು|
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು||
ಒಳಿತು ಮಾಡದ ಕೆಡಕು ಎಣಿಸಲರಿಯದವರಿಹರು|
ಇವರೊಳು ನೀಯಾರು ನಾಯಾರು ಹೇಳು ಮೂಢ||

ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ|
ಕಿರಿಪಿರಿಯ ಮಾತುಗಳಿಗೆನ್ನ ಜಿಹ್ವೆ ಪ್ರತಿಯಾಡದಿರಲಿ||
ಆಲಿಸಲಿಚ್ಛಿಸದ ಕಿವಿಗಳಿಗೆ ಉಪದೇಶ ವ್ಯರ್ಥ|
ಎನ್ನ ಭಾವನೆಗಳೆನಗಿರಲೆಂಬುದಂತರಾರ್ಥ ಮೂಢ||

ಪರರೆಂತಿರಬೇಕೆಂದು ಬಯಸುವುದು ನೀನು?|
ಅಂತಪ್ಪ ಮಾದರಿಯು ಮೊದಲಾಗು ನೀನು||
ಬದಲಾಗು ನೀ ಮೊದಲು ಬದಲಾಗು ನೀನು|
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
**************
-ಕ.ವೆಂ.ನಾಗರಾಜ್.

1 ಕಾಮೆಂಟ್‌:

 1. ನಾರಾಯಣ ಭಾಗ್ವತ
  08JUL2010 6:38
  ಕವಿನಾಗರಾಜ್ ರವರೆ ಕಗ್ಗ ತುಂಬಾ ಇಷ್ಟವಾಯಿತು .ತುಂಬಾ ಅರ್ಥಭರಿತ ಸಾಲುಗಳು.
  ಧನ್ಯವಾದಗಳು.

  Kavinagaraj
  08JUL2010 7:32
  ಧನ್ಯ, ಭಾಗ್ವತರೇ. :-)

  ಮನು
  08JUL2010 6:45
  ಅರ್ಥಪೂರ್ಣ ಸಾಲುಗಳು...ಹಳಗನ್ನಡ ಓದಲಿಕ್ಕೆ ಒಂದ್ ರೀತಿ ಚೆಂದ
  ಮೊದಲನೆಯದ್ದು ಓದ್ತಿರುವಾಗ ಹಾಗೇ `ಯಾರು ಹಿತವರು ಈ ಮೂವರೊಳಗೆ...' ಹಾಡು ನೆನಪಾಯಿತು..
  ವಂದನೆಗಳು ನಾಗರಾಜರೆ
  --ಮನು

  Kavinagaraj
  08JUL2010 7:32
  ನಮನಗಳು ಮನುರವರಿಗೆ. :-)

  Ksraghavendranavada
  08JUL2010 7:11
  ಸೊಗಸಾಗಿವೆ ಕವಿನಾಗರಾಜರೇ...ಎ೦ದಿನ೦ತೆ ಮೂಡೌವಾಚ ನೀತಿಯುತ.
  <<ಬದಲಾಗು ನೀ ಮೊದಲು ಬದಲಾಗು ನೀನು|
  ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||<<
  ಸಾಲುಗಳು ಅರ್ಥಗರ್ಭಿತ.
  ನಮಸ್ಕಾರಗಳೊ೦ದಿಗೆ.

  Kavinagaraj
  08JUL2010 7:34
  ನಿಮ್ಮ ಮೆಚ್ಚುಗೆ ಮತ್ತೂ ಸೊಗಸು. ನಮಸ್ಕಾರಗಳು. :-)

  ಬೆಳ್ಳಾಲ ಗೋಪೀನಾಥ ರಾವ್
  08JUL2010 7:16

  ಕವಿಯವರೇ
  ಎಂದಿನಂತೆ ಸೂಪರ್.ಮಾದರಿಯ ಮಾದರಿ ನೀನಾಗು ತುಂಬಾನೇ ಒಳ್ಳೆಯ ಮಾತುಗಳು. ಕವಿಯವರೇ ಧನ್ಯವಾದಗಳು

  Kavinagaraj
  08JUL2010 7:34
  ಶರಣು. :-)

  Deepak D'silva
  08JUL2010 9:13
  ಸುಂದರ
  ಅರ್ಥಪೂರ್ಣ

  ಹರಿಹರಪುರಶ್ರೀಧರ್
  08JUL2010 9:19
  ನಾಗರಾಜ್,
  ಎಲ್ಲಾ ಚೆನ್ನಾಗಿದೆ.

  Kavinagaraj
  09JUL2010 9:52
  ಧನ್ಯವಾದ ಶ್ರೀಧರ್.

  Kavinagaraj
  09JUL2010 9:54
  ದೀಪಕ್, ನಮಸ್ಕಾರಗಳು.

  ಹೊಳೆ ನರಸೀಪುರ ಮಂಜುನಾಥ
  08JUL2010 9:19
  ಕವಿ ನಾಗರಾಜರೆ, ನಮ್ಮ ಸುತ್ತಲ ಜನರನ್ನು ಹಾಗೆಯೇ ತೋರಿಸಿದ್ದೀರಿ, ಎಲ್ಲ ಸಾಲುಗಳೂ ಚೆನ್ನಾಗಿ ಮೂಡಿ ಬ೦ದಿವೆ.

  Kavinagaraj
  09JUL2010 9:54
  ಧನ್ಯವಾದ, ಹೊ.ನ.ಪುರ ಮಂಜುರವರೇ.

  ಪ್ರತ್ಯುತ್ತರಅಳಿಸಿ