ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು|
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಓ ಮೂಢ||
ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?|
ಕೊಂಕರಸುವ ಡೊಂಕ ಮನವೊಡೆವ ಕೆಡುಕನ
ಹುಣ್ಣನರಸುವ ನೊಣನೆಂದೆಣಿಸು ಮೂಢ||
ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣಕೆ ಮನ್ನಣ|
ಆವರಣ ಹೂರಣ ಚೆಂದವಿರೆ ಪ್ರೇರಣ
ಬದುಕು ಸುಂದರ ಪಯಣ ಕಾಣಾ ಮೂಢ||
-ಕ.ವೆಂ.ನಾಗರಾಜ್.
ಮನೆಮುರುಕರಿಂ ಮನವು ಮಟ್ಟವಾಗಿಹುದು|
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಓ ಮೂಢ||
ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?|
ಕೊಂಕರಸುವ ಡೊಂಕ ಮನವೊಡೆವ ಕೆಡುಕನ
ಹುಣ್ಣನರಸುವ ನೊಣನೆಂದೆಣಿಸು ಮೂಢ||
ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣಕೆ ಮನ್ನಣ|
ಆವರಣ ಹೂರಣ ಚೆಂದವಿರೆ ಪ್ರೇರಣ
ಬದುಕು ಸುಂದರ ಪಯಣ ಕಾಣಾ ಮೂಢ||
-ಕ.ವೆಂ.ನಾಗರಾಜ್.
Ksraghavendranavada
ಪ್ರತ್ಯುತ್ತರಅಳಿಸಿ28JUN2010 1:01
ಎ೦ದಿನ೦ತೆ ನೀತಿ ಭೋಧಕರ...
ನಮಸ್ಕಾರಗಳೊ೦ದಿಗೆ.
Kavinagaraj
29JUN2010 11:05
ಧನ್ಯವಾದ ನಾವಡರೇ. :-)
ಬೆಳ್ಳಾಲ ಗೋಪೀನಾಥ ರಾವ್
28JUN2010 7:33
ಕವಿಗಳೆ ತುಂಬಾ ದೊಡ್ಡ ನಮಸ್ಕಾರ
ಅರ್ಥ ಗರ್ಭಿತವಾಗಿ, ಮನಮುಟ್ಟುವಂತೆ ಸೊಗಸಾಗಿ
ಮೂಡಿ ಬಂದಿವೆ
Kavinagaraj
29JUN2010 11:06
ತುಂಬಾ ದೊಡ್ಡ ಧನ್ಯವಾದ, ಗೋಪಿನಾಥ್. :-)
ನಾರಾಯಣ ಭಾಗ್ವತ
28JUN2010 10:16
ಕವಿನಾಗರಾಜ್ ರವರೆ ನಮಸ್ಕಾರ. ತುಂಬಾ ಅರ್ಥಪೂರ್ಣ ಕವನ.ನಿಮಗಿದೋ ಗೌರವಪೂರ್ವಕ ನಮನ.
Kavinagaraj
29JUN2010 11:07
ಧನ್ಯವಾದ, ಭಾಗ್ವತರೇ. :-
ಪದಗಳೊಂದಾಗಿ ಸಮರಸದಿ ಬೆರೆಯೆ
ಪ್ರತ್ಯುತ್ತರಅಳಿಸಿಮೂಡಲೊಂದರ್ಥ ಜತನದಿ ಬರೆಯೆ
ಸೊಗಸಾಗಿ ಮೇಳೈಸೆ ಕವನದ ರೀತಿ
ಕಲಿಸುತಿದೆ ಬದುಕಿಗೆ ಹೊಸದೊಂದು ನೀತಿ :-)
ಮುದಗೊಳಿಸುವ ಹದವಾದ ಪ್ರತಿಕ್ರಿಯೆಗೆ ಧನ್ಯವಾದಗಳು, ವಸಂತಕುಮಾರರೇ.
ಅಳಿಸಿ