ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 30, 2010

ಮೂಢ ಉವಾಚ -15

ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು|
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು|
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ||


ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರಾ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||
*****************
-ಕವಿನಾಗರಾಜ್.

4 ಕಾಮೆಂಟ್‌ಗಳು:

 1. ನಾಗರಾಜ್ ಸರ್,
  ನಿಮ್ಮೆಲ್ಲಾ ಲೇಖನ, ಕವನಗಳನ್ನೂ ಓದಿದೆ. ಮೂಢ ಉವಾಚ ಮನುಜನ ಜೀವನಕ್ಕೆ ನಿತ್ಯ ಸಾರ.
  ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಕಷ್ಟ ಕಾರ್ಪಣ್ಯಗಳು, ನಡೆದ ಘಟನೆಗಳು ಆ ಸಮಯದ ಅನುಭವಗಳು, ಒಂದು ಕ್ಷಣ ನನ್ನನ್ನು ನಡುಗಿಸಿದ್ದಂತೂ ಸತ್ಯ......

  ಪ್ರತ್ಯುತ್ತರಅಳಿಸಿ
 2. ತೇಜಸ್ವಿ
  04AUG2010 4:28
  ಸೂಪರ್ರಾಗಿದೆ ಕವಿಗಳೇ ನಿಮ್ಮ ಮಾತುಗಳು....ಒಳ್ಳೆಯ ಪದಗಳ ಬಳಕೆ...ಹೀಗೆ ಮುಂದುವರಿಯಲಿ ನಿಮ್ಮ ಮೂಢ ಉವಾಚ

  Kavinagaraj
  04AUG2010 7:46
  ತೇಜಸ್ವಿ, ನಿಮ್ಮ ಮೆಚ್ಚುಗೆ ಹಾಗೂ ಪ್ರೋತ್ಸಾಹಕ್ಕೆ ವಂದನೆಗಳು.

  ಹೊಳೆ ನರಸೀಪುರ ಮಂಜುನಾಥ
  04AUG2010 4:43
  ಕವಿ ನಾಗರಾಜರೆ, ಪ್ರತಿಯೊ೦ದು ಸಾಲು ರುದ್ರ ಭಯ೦ಕರ! ಕೋಪದ ರೌದ್ರತೆಯನ್ನು ಚೆನ್ನಾಗಿ ಬಿ೦ಬಿಸಿವೆ.

  Kavinagaraj
  04AUG2010 7:47
  ಮಂಜು, ನಿಮ್ಮ ಪ್ರತಿಕ್ರಿಯೆ ಉತ್ತೇಜಕವಾಗಿದೆ. ಧನ್ಯವಾದ.

  ಗೋಪಾಲ್ ಮಾ ಕುಲಕರ್ಣಿ
  04AUG2010 5:01
  <> ಚೆನ್ನಾಗಿ ಹೇಳಿದಿರಿ ಕವಿಗಳೇ ನರ ರಕ್ಕಸ ಆಗುವ ಸಂದರ್ಭ ಚೆನ್ನಾಗಿ ವಿವರಿಸಿದ್ದೀರ.
  ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರೋದಿಲ್ಲ.ಕೋಪ ಪಾಪ ಕೂಪ...
  ಧನ್ಯವಾದಗಳು.

  Kavinagaraj
  04AUG2010 7:48
  ಗೋಪಾಲ್, ನಿಮ್ಮ ಮೆಚ್ಚುಗೆಗಾಗಿ ವಂದಿಸುವೆ.

  Deepak D'silva
  04AUG2010 6:10
  ಕ್ರೋದದಲ್ಲಿ ವಿವೇಕ ಕಳೆದುಕೊಂಡು ಮೂರ್ಖರಾಗಿವರ್ತಿಸುತ್ತೇವೆ.
  ಮತ್ತೆ ಪರಿತಾಪ ಪಟ್ಟು ಪ್ರಯೋಜನವಿಲ್ಲದಾಗುತ್ತದೆ.
  ಚೆನ್ನಾಗಿದೆ ನಿಮ್ಮ ನೀತಿ ಕಗ್ಗ

  Kavinagaraj
  04AUG2010 7:57
  ದೀಪಕ್, ನಿಮ್ಮ ಪ್ರತಿಕ್ರಿಯೆ ಮುದ ನೀಡಿತು.

  Ksraghavendranavada
  04AUG2010 6:18
  ಈವಾರದ ಮೂಢ ಉವಾಚ ಕ್ರೋಧಾಸುರನ ಬಗ್ಗೆ! ಕೋಪದ ವಿಷಯವನ್ನೇಕೆ ಇನ್ನೂ ಮೂಢ ಉವಾಚದಲ್ಲಿ ಬಳಸಿಕೊ೦ಡಿಲ್ಲವೆ೦ಬುದನ್ನು ಯೋಚಿಸುತ್ತಿದೆ. ಇವತ್ತು ಸ೦ತಸವಾಯಿತು. ಸರಣಿ ಮು೦ದುವರೆಯಬೇಕೆ೦ಬುದೆ ನನ್ನ ಅಪೇಕ್ಷೇ. ನನ್ನ ಅಪೇಕ್ಷೆಗೆ ಸಕಾರಾತ್ಮಕವಾಗಿ ಸ್ಪ೦ದಿಸುವಿರೆ೦ಬ ಭರವಸೆ ಇದೆ.
  ನಮಸ್ಕಾರಗಳೊ೦ದಿಗೆ,

  Kavinagaraj
  04AUG2010 7:58
  ನಾವಡರೇ, ನಿಮ್ಮ ಮೆಚ್ಚುಗೆ, ಪ್ರೋತ್ಸಾಹಗಳಿರುವಾಗ ಮುಂದುವರೆಯಲೇಬೇಕಲ್ಲವೇ? ನಮಸ್ಕಾರಗಳು.

  ಬೆಳ್ಳಾಲ ಗೋಪೀನಾಥ ರಾವ್
  04AUG2010 7:52
  ಉತ್ತಮ
  ಸೂಪರ್
  ಕವಿಯವರೇ

  Kavinagaraj
  04AUG2010 7:59
  ಗೋಪಿನಾಥ್, ನಿಮ್ಮ ಹಿತಕರ ಪ್ರತಿಕ್ರಿಯೆಗೆ ವಂದನೆಗಳು.

  ನಾರಾಯಣ ಭಾಗ್ವತ
  05AUG2010 9:08
  ಕವಿ ನಾಗರಾಜ್ ರವರೆ
  ನಿಮ್ಮ ಮೂಢ ಉವಾಚ ಚೆನ್ನಾಗಿ ಮೂಡಿ ಬರುತ್ತಿದೆ.
  ಪ್ರತಿಯೊಂದರಲ್ಲೂ ಉತ್ತಮ ನೀತಿ ಸಾರವಿದೆ. ವಂದನೆಗಳು ತಮಗೆ.

  Kavinagaraj
  05AUG2010 9:18
  ಹಿತವೆನಿಸುವ ವಿಮರ್ಶೆಗೆ ವಂದಿಸುವೆ, ಭಾಗ್ವತರೇ.

  ಆಸು ಹೆಗ್ಡೆ
  05AUG2010 9:22
  ರಕ್ಕಸನ ಬಾಹ್ಯಾಂತರಿಕ ಚಿಹ್ನೆಗಳನ್ನೆಲ್ಲಾ ನೀಡಿದ್ದೀರಿ
  ಇನ್ನು ಆತ ನಂಗೆಲ್ಲಿ ಎದುರಾದರೂ ಗುರುತು ಹಿಡಿತೀನಿ
  :)

  Kavinagaraj
  05AUG2010 12:36
  ಧನ್ಯವಾದಗಳು ಸುರೇಶರೇ. ನಿಮ್ಮ ಮೆಚ್ಚುಗೆ ನನ್ನಲ್ಲಿ ಹುರುಪು ತಂದಿದೆ.

  ಆಸು ಹೆಗ್ಡೆ
  05AUG2010 10:07
  ಚೆನ್ನಾಗಿದೆ.

  Kavinagaraj
  05AUG2010 12:37
  :-)

  ಪ್ರತ್ಯುತ್ತರಅಳಿಸಿ
 3. Ksraghavendranavada
  09AUG2010 6:07
  ಎ೦ದಿನ೦ತೆ ಅರ್ಥವತ್ತಾಗಿದೆ.ಮು೦ದುವರೆಯಲಿ.
  ನಮಸ್ಕಾರಗಳೊ೦ದಿಗೆ,

  Kavinagaraj
  09AUG 2010 8:20
  ಪ್ರತಿಕ್ರಿಯೆಗಾಗಿ ವಂದನೆಗಳು, ನಾವಡರೇ.

  ಸಂತೋಷ್ ಎನ್. ಆಚಾರ್ಯ
  09AUG2010 6:18
  ಎಂದಿನಂತೆ ಚೆನ್ನಾಗಿದೆ.
  ನಿಯಂತ್ರಿತ ಕೋಪವೂ ಅಗತ್ಯ ಅಲ್ಲವೇ, ಪರಶಿವನಂತೆ!

  Kavinagaraj
  09AUG2010 8:21
  ಹೌದು, ಸಂತೋಷ್. ಸೂಕ್ತ ವಿಮರ್ಶೆಗೆ ಧನ್ಯವಾದಗಳು.

  ಬೆಳ್ಳಾಲ ಗೋಪೀನಾಥ ರಾವ್
  09AUG2010 6:36
  ಚೆನ್ನಾಗಿದೆ ಕವಿಗಳೇ
  ಹೌದು ಕೆಲವೆಡೆಗಳಲ್ಲಿ ಕೋಪವಿಲ್ಲದಿರೆ ತಲೆಯ ಮೇಲೆ ಹತ್ತಿ ಕುಳಿತಾರು,
  ಆದರೆ ಸೂಕ್ತ ಕೋಪವನ್ನು ಸೂಕ್ತ ಸಮಯದಲ್ಲಿ ಸೂಕ್ತವಾಗಿ ಉಪಯೋಗಿಸುವವನು ಇಲ್ಲವೆಂದೇ ನನ್ನ ಅಭಿಪ್ರಾಯ

  Kavinagaraj
  09AUG2010 8:24
  ನಿಜ ಗೋಪಿನಾಥ್ ರವರೇ. ನಿಮ್ಮ ಅಭಿಪ್ರಾಯಕ್ಕಾಗಿ ವಂದಿಸುವೆ. ಮುಂದಿನ ಕಂತಿನಲ್ಲಿ ಈ ಕುರಿತು ಪ್ರಸ್ತಾಪಿಸುವೆ.

  ಪ್ರತ್ಯುತ್ತರಅಳಿಸಿ