ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 20, 2010

ಮೂಢ ಉವಾಚ -12

ಮತಿಗೆಟ್ಟು ಅರಚಾಡಿ ಬಂದ ಫಲವೇನು?
ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?|
ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?
ಸಮಚಿತ್ತದಕ್ಕರೆಯೊಂದೆ ಒಲಿಸುವುದು ಮೂಢ||


ನೀ ಸರಿಯಾಗಿದ್ದರದುವೆ ಸಾಕು
ಪರರ ಗೊಡವೆ ನಿನಗೇಕೆ ಬೇಕು?|
ತಿದ್ದುವ ಹಂಬಲಕೆ ಕಡಿವಾಣ ಹಾಕು
ಮನವನನುಗೊಳಿಸಿ ಶಾಂತನಿರು ಮೂಢ||


ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?
ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?|
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತಡಿಯಿಡು ಮೂಢ||


ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ
ಮನೆಮಂದಿಯೇ ನಿನ್ನ ಹೀಗಳೆಯುತಿರಲಿ|
ಕೆರಳದಿರಲಿ ಕೊರಗದಿರಲಿ ಮನವು
ಧೃತಿಗೆಟ್ಟು ದಾರಿ ತಪ್ಪದಿರಲಿ ಮೂಢ||
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. 'ಶಾಮಲ'
    10JUL2010 12:22
    ಕವಿನಾಗರಾಜ್ ಅವರೇ
    ಚೆನ್ನಾಗಿದೆ ಕಗ್ಗ !
    ನೀ ಸರಿಯಾಗಿದ್ದರದುವೆ ಸಾಕು|
    ಪರರ ಗೊಡವೆ ನಿನಗೇಕೆ ಬೇಕು?||
    ತಿದ್ದುವ ಹಂಬಲಕೆ ಕಡಿವಾಣ ಹಾಕು|
    ನನಗೂ ಕೆಲವು ಸಾರಿ ಇದು ಅನ್ವಯವಾಗತ್ತೆ , ಏನ್ಮಾಡೋದು ಹುಟ್ಗುಣ :) )
    ನಮಸ್ಕಾರ,
    ಶಾಮಲ

    Ksraghavendranavada
    10JUL2010 12:44
    ಎ೦ದಿನ೦ತೆ ಅರ್ಥಗಭಿ೯ತ ಕವಿ ನಾಗರಾಜರೇ...ಎರಡನೆಯ ಪದ್ಯದ ಸಾಲುಗಳು ತು೦ಬಾ ಅರ್ಥಗರ್ಭಿತ. ನೀತಿಯುಕ್ತ.
    ನಮಸ್ಕಾರಗಳೊ೦ದಿಗೆ,

    Kavinagaraj
    10JUL2010 1:13
    ನಮಸ್ಕಾರಗಳು. ಮೆಚ್ಚುಗೆಗೆ :-)
    ಬೆಳ್ಳಾಲ ಗೋಪೀನಾಥ ರಾವ್
    12JUL2010 1:27
    ಕವಿಯವರೇ
    ತುಂಬಾನೇ ಚೆನ್ನಾದ ಸಾಲುಗಳು
    ಕೇಳುವ ಹಾಡಿನ ಸಾಲೊಂದು
    ಮಾನ ಹಾನಿಯಾಗದಿರಲು ದಾರಿಯೆಂದರೆ
    ಆದರಿಸದ ಜನಗಳಿಂದ ದೂರ ಇರುವುದು

    Kavinagaraj
    12JUL2010 9:12
    ಮನ ಮುಟ್ಟಿದ ಪ್ರತಿಕ್ರಿಯೆಗಾಗಿ ವಂದಿಸುವೆ, ಗೋಪಿನಾಥರೇ.

    Komal
    12JUL2010 5:00
    ಉತ್ತಮ ಸಾಲುಗಳು, ಚೆನ್ನಾಗಿದೆ ಸರ್.

    ವಸಂತ್ ಆರ್
    12JUL2010 5:08
    ನಮ್ಮಯ ಶ್ರೇಷ್ಠ ದಾಸರ ಪದಗಳನ್ನು ಓದಿದಷ್ಟು ಕುಶಿಯಾಯಿತು ಧನ್ಯವಾದಗಳು kavinagaraj ಸರ್,
    ವಸಂತ್.

    Kavinagaraj
    12JUL2010 9:16
    ನಿಮ್ಮ ಪ್ರತಿಕ್ರಿಯೆ ನನಗೂ ಖುಷಿ ಕೊಟ್ಟಿತು, ವಸಂತ್.

    Kavinagaraj
    12JUL2010 9:16
    ಧನ್ಯವಾದ, ಕೋಮಲ್.

    ನಾರಾಯಣ ಭಾಗ್ವತ
    13JUL2010 8:43
    ಕವಿನಾಗರಾಜ್ ರವರೆ -ನಿಮ್ಮ 'ಮೂಢ ಉವಾಚ' ಚೆನ್ನಾಗಿ ಮೂಡಿಬರುತ್ತಿದೆ. ತುಂಬಾ ಇಷ್ಟವಾಯಿತು.
    ವಂದನೆಗಳು.

    Kavinagaraj
    13JUL2010 2:30
    ಭಾಗ್ವತರೇ, ತುಂಬಾ ಇಷ್ಟವಾಯಿತು ಎಂಬ ನಿಮ್ಮ ಮಾತು ನನಗೆ ಖುಷಿ ನೀಡಿದೆ.

    ಪ್ರತ್ಯುತ್ತರಅಳಿಸಿ