ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಸೆಪ್ಟೆಂಬರ್ 16, 2011

ಬೆಲಗೂರಿನಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ - 24ರಿಂದ 28-08-2011

     ಬೆಲಗೂರಿನಲ್ಲಿ  24ರಿಂದ 28-08-2011ರವರೆಗೆ ನಡೆದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ, ಸಹಸ್ರ ಕುಂಭಾಭಿಷೇಕ ವೀಕ್ಷಿಸಲು ಅನೇಕ ಸ್ಥಳಗಳಿಂದ ಭಕ್ತರು ಆಗಮಿಸಿದ್ದರು. ಆ ಸಂದರ್ಭದ ಕೆಲವು ದೃಷ್ಯಗಳು:     ಸ್ವಾಮಿ ಬಿಂದು ಮಾಧವ ಶರ್ಮರವರ ಚೈತನ್ಯಶೀಲ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುವಂತಹುದು. ಜಾತಿಭೇದ ಮಾಡದ , ಎಲ್ಲರನ್ನೂ ಸಮಾನರಾಗಿ ಕಾಣುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ನಾಲ್ಕು ದಿನಗಳ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಪ್ರೇರಕರಾದ ಅವರ ಶಕ್ತಿ ಆಶ್ಚರ್ಯ ತರುವಂತಹುದು. ವೈಯಕ್ತಿಕವಾಗಿ ನನಗೆ ದೇವಸ್ಥಾನದ ಹೊರಗೆ ಕುಳಿತು ಏಕನಾದದೊಂದಿಗೆ ತತ್ವಪದ ಹೇಳುತ್ತಿದ್ದ ಒಬ್ಬ ವ್ಯಕ್ತಿ ಗಮನಸೆಳೆದ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಚೇತೋಹಾರಿಯಾಗಿದ್ದವು. ಕಲ್ಯಾಣರಾಮನ್ ರವರು ಭಜನೆಗಳನ್ನು ಹೇಳಿ ಸೇರಿದ್ದವರನ್ನು ಭಕ್ತಿಪರವಶರಾಗಿಸಿದ್ದಲ್ಲದೆ ಕುಣಿಯುವಂತೆ ಮಾಡಿದ್ದು ಮನಸ್ಸಿಗೆ ಉಲ್ಲಾಸ ನೀಡಿತೆಂದರೆ ಅತಿಶಯೋಕ್ತಿಯಲ್ಲ.
***************
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು: