ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಸೆಪ್ಟೆಂಬರ್ 4, 2011

ಮೂಢ ಉವಾಚ - 68

ಕುಜನರೊಡನಾಡಿ ವಂಚನೆಯ ಗೈಯುವನು
ಪರರ ನೋವಿನಲಿ ಆನಂದ ಕಾಣುವನು |
ಆಲಸಿಕ ತಾನಾಗಿ ಪಶುವಿನಂತಾಡುವನು
ಅಯುಕ್ತನವನಸುರನೋ ಮೂಢ || 


ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕರಸುವ ಸಂಶಯಿ ಹಾಳು |
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ

ಪರರಿಗೂ ಅವನಿಂದ ಸುಖವಿಲ್ಲ ಮೂಢ || 


ವಿಶ್ವಾಸವಿರುವವರು ಇತಿಹಾಸ ರಚಿಸುವರು
ಅವರ ಇತಿಹಾಸವೇ ಜಗದ ಇತಿಹಾಸ |
ವಿಶ್ವಾಸದಿಂದುದಯ ಮನೋಬಲ ಚೇತನ
ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ ||


ನೂರು ದೇವರನು ನಂಬಿದೊಡೆ ಫಲವೇನು
ತನ್ನ ತಾ ನಂಬದಿರೆ ಬೀಳದಿಹರೇನು | 
ದೇವನನು ನಂಬಿ ವಿಶ್ವಾಸಜೊತೆಯಿರಲು
ಗರಿಮೆಯ ಸಿರಿಗರಿ ನಿನದೆ ಮೂಢ || 
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಪರರ ನೋವಿನಲಿ ಆನಂದ ಕಾಣುವನು - sadist ಅಲ್ಲವೇ? 'ಮೂಢ' ಅ೦ತ ಏಕೆ ಅ೦ತ್ಯಗೊಳಿಸುತ್ತಿದ್ದೀರಿ ಸರ್? ತಿಳಿಸಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಯಾರು ಅಸುರ ಎಂದು ಮೂಢನನ್ನುದ್ದೇಶಿಸಿ ಹೇಳಿದ್ದೇ ಹೊರತು ಅಸುರನೇ ಮೂಢ ಎಂಬ ಅರ್ಥ ಬರುವುದಿಲ್ಲವೆಂದು ನನ್ನ ಅನಿಸಿಕೆ. ಪ್ರತಿಕ್ರಿಯೆಗೆ ವಂದನೆ, ಪ್ರಭಾಮಣಿಯವರೇ.

    ಪ್ರತ್ಯುತ್ತರಅಳಿಸಿ